

ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಕಾರ್ಖಾನೆ ಹಿರಿಯ ಸಂಚಾಲಕ ಶಿವನಾಯಿಕ ನಾಯಿಕ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸಕ್ತ ಹಂಗಾಮಿನ 76 ದಿನಗಳ ಕಾರ್ಯಾಚರಣೆಯಲ್ಲಿ ಕಾರ್ಖಾನೆ 4,89,706 ಮೆ.ಟನ್ ಕಬ್ಬು ನುರಿಸಿ 4,44,600 ಕ್ವಿಂಟಾಲ್ ಸಕ್ಕರೆ ಉತ್ಪಾದಿಸುವ ಜತೆಗೆ 24 ಲಕ್ಷ ಲೀಟರ್ ಸ್ಪಿರಿಟ್ ಉತ್ಪಾದಿಸಿದೆ ಎಂದರು.
ಕಾರ್ಖಾನೆ ಸಂಚಾಲಕ ಅಪ್ಪಾಸಾಹೇಬ ಶಿರಕೋಳಿ, ಪ್ರಭುದೇವ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಬಸ್ಸಪ್ಪ ಮರಡಿ, ಬಸವರಾಜ ಕಲ್ಲಟ್ಟಿ, ಸುರೇಂದ್ರ ದೊಡ್ಡಲಿಂಗನವರ, ಬಾಬಾಸಾಹೇಬ ಅರಬೋಳೆ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಕಾರ್ಯಾಲಯ ಅಧೀಕ್ಷಕ ಸುಭಾಸ ನಾಶಿಪುಡಿ, ಅಧಿಕಾರಿಗಳಾದ ಎಂ.ಆರ್.ಪಾಟೀಲ, ಸಂತೋಷ ನಾಗನ್ನವರ, ಕೆ.ಆರ್.ಬೆಟಗೇರಿ, ಎ.ಆರ್.ಚಾಟೆ, ವಿ.ಎಂ.ಬೆಲ್ಲದ ಎನ್.ಜಿ.ಖೋತ, ಜಿ.ಐ.ಬೊಮ್ಮನ್ನವರ, ಆನಂದ ಪೂಜೇರಿ, ಡಿ.ಎನ್.ಚೌಗಲಾ, ಬಿ.ಎಸ್.ವರ್ಜಿ, ಪ್ರಕಾಶ ಮುಗಳಿ, ಸಿ.ಬಿ.ಮರೇದಿ, ಬಾಬಾಸಾಹೇಬ ನಾಗನೂರಿ, ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಲಕ್ಷ್ಮಣ ಹಂಚಿನಮನಿ, ಬಾಬಾಸಾಹೇಬ ಅರಬೋಳೆ ಇತರರಿದ್ದರು.