

ಬಾಳೆಹೊನ್ನೂರು: ಪಟ್ಟಣದ ರೋಟರಿ ಕ್ಲಬ್ 2023-24ನೇ ಸಾಲಿನಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳಿಗೆ ರೋಟರಿ ಜಿಲ್ಲೆ 3182ರಲ್ಲಿ ಒಟ್ಟು 24 ವಾರ್ಷಿಕ ಪ್ರಶಸ್ತಿಗಳನ್ನು ಪಡೆದಿದೆ ಎಂದು ನಿಕಟಪೂರ್ವ ಅಧ್ಯಕ್ಷ ಎ.ಆರ್.ಸುರೇಂದ್ರ ತಿಳಿಸಿದ್ದಾರೆ.
2023-24ನೇ ಸಾಲಿನಲ್ಲಿ ಸಂಸ್ಥೆ ನಡೆಸಿರುವ ವಿವಿಧ ಕಾರ್ಯಕ್ರಮಗಳಿಗೆ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ,11 ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ 11 ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ರೋಟರಿ ಜಿಲ್ಲೆ 3182ರಲ್ಲಿ ವಾರ್ಷಿಕ ಸಮಗ್ರ ಪ್ರಶಸ್ತಿ ಗಳಿಸಿದೆ. ಪ್ರಮುಖವಾಗಿ ವೃತ್ತಿಪರ ಮಾಹಿತಿ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ, ರೋಟರಿ ದತ್ತಿನಿಧಿ, ಚತುರ್ವಿಧ ಪರೀಕ್ಷೆ, ರೋಟರಿ ಗ್ರಾಮೀಣ ದಳ, ಮಣ್ಣಿನ ಲವತ್ತತೆ ಮತ್ತು ಸಂರಕ್ಷಣೆ, ಇ-ತ್ಯಾಜ್ಯ ವಸ್ತುಗಳ ನಿರ್ವಹಣೆ, ರಸ್ತೆ ಸುರಕ್ಷತೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗಾಗಿ 24 ಪ್ರಶಸ್ತಿಗಳು ಲಭಿಸಿದೆ.
ಸಂಸ್ಥೆ ಪೂರ್ವಾಧ್ಯಕ್ಷರು ಹಾಗೂ ಸದಸ್ಯರ ಮಾರ್ಗದರ್ಶನದಲ್ಲಿ ಸಂಸ್ಥೆಯು ಈ ಬಾರಿ ಹೆಚ್ಚಿನ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ಬಿ.ಸಿ.ಗೀತಾ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ ಎಂದು ತಿಳಿಸಿದರು.