23ರಿಂದ ಕೊಡವ ಸಮಾಜದ ಶತಮಾನೋತ್ಸವ ಆಚರಣೆ

Published on

ವಿರಾಜಪೇಟೆ: ಶತಮಾನದ ಪೂರೈಸಿರುವ ವಿರಾಜಪೇಟೆ ಕೊಡವ ಸಮಾಜದ ಶತಮಾನೋತ್ಸವ ಸಂಭ್ರಮಾಚರಣೆ ಸೆ. 23, 24 ರಂದು ನಡೆಯಲ್ಲಿದ್ದು , ತ್ರಿವೇಣಿ ಶಾಲೆಯ ಜಿಲ್ಲಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಎ.ಮನುಕುಮಾರ್ ತಿಳಿಸಿದರು.

ಕೊಡವ ಸಮಾಜವು 1921ರಲ್ಲಿ ಆರಂಭವಾಗಿದ್ದು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಇದೀಗ ಕೊಡವ ಸಮಾಜ ನೂರು ವರ್ಷ ಪೂರೈಸುತ್ತಿರುವ ಸಂಭ್ರಮದಲ್ಲಿ ಎರಡು ದಿನ ಕ್ರೀಡಾ ಉತ್ಸವ, ಸಾಂಸ್ಕೃತಿಕ ಉತ್ಸವ, ಗಣ್ಯರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ, ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.23ರಂದು ಪಟ್ಟಣದ ಮಹಾಗಣಪತಿ ದೇವಾಲಯದ ಬಳಿಯಿಂದ ದೊಡ್ಡಟ್ಟಿ ಚೌಕಿ ಮಾರ್ಗವಾಗಿ ಅಪ್ಪಯ್ಯ ಸ್ವಾಮಿ ರಸ್ತೆಯ ಮೂಲಕ ಮೆರವಣಿಗೆ ಮೂಲಕ ಕೊಡವ ಸಮಾಜಕ್ಕೆ ಬರುವ ಕಾರ್ಯಕ್ರಮವಿದ್ದು ಜನಾಂಗದವರು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಮೂಲಕ ಮೆರವಣಿಗೆಗೆ ಕಳೆ ಕಟ್ಟಬೇಕು ಎಂದರು.

ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಸಂಸದ ಪ್ರತಾಪ್ ಸಿಂಹ, ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕೊಡವ ಸಮಾಜದ ಪದಾಧಿಕಾರಿ ಮಾದೇಯಂಡ ಸಂಪಿ ಪೂಣಚ್ಚ, ನಿರ್ದೇಶಕರಾದ ಚೇಮಿರ ಸಿ.ಅರ್ಜುನ್, ಬಾಚೀರ ಜಿ. ಜಗದೀಶ್, ತಾತಂಡ ಕಬೀರ್ ಗಣಪತಿ, ಪುಲಿಯಂಡ ಎ.ಪೊನ್ನಣ್ಣ, ಮಹಿಳಾ ನಿರ್ದೇಶಕರಾದ ಮೇರಿಯಂಡ ಗಾಯತ್ರಿ, ಚೋಕಂಡ ಪುಷ್ಪಾವತಿ, ಮುಲ್ಲೇಂಗಡ ಶೀಲ ಅಪ್ಪಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net