23ರಂದು ಶ್ರೀರಂಗಪಟ್ಟಣಕ್ಕೆ ಪಂಚರತ್ನ ರಥಯಾತ್ರೆ

SRP_19-01jpg
Published on

ಶ್ರೀರಂಗಪಟ್ಟಣ: ಜೆಡಿಎಸ್ ಪಕ್ಷದ ಮಹತ್ವದ ಪಂಚರತ್ನ ರಥಯಾತ್ರೆ ಡಿ.23ರಂದು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.


ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 9ಕ್ಕೆ ಮಂಡ್ಯ ತಾಲೂಕು ಕ್ಷೇತ್ರದ ಕ್ಯಾತುಂಗೆರೆ ಗ್ರಾಮ ಮೂಲಕ ಕೊತ್ತತ್ತಿ, ಪೀಹಳ್ಳಿ, ಕೊಡಿಯಾಲ, ಅರಕೆರೆ ಮಾರ್ಗವಾಗಿ ಮಹದೇವಪುರಕ್ಕೆ ಬರಲಿದೆ. ಬಳಿಕ ಶಾಂತಿಕೊಪ್ಪಲು, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಮರಳಾಗಾಲ, ಬಾಬುರಾಯನಕೊಪ್ಪಲು, ಕಿರಂಗೂರು ಮಾರ್ಗವಾಗಿ ಮಧ್ಯಾಹ್ನದ ವೇಳೆಗೆ ಶ್ರೀರಂಗಪಟ್ಟಣದ ಕುವೆಂಪು ವೃತ್ತಕ್ಕೆ ತಲುಪಿಲಿದೆ.


ಪಟ್ಟಣದಿಂದ ಪುನಃ ಆರಂಭವಾಗಿ ಪಶ್ಚಿಮವಾಹಿನಿ, ಪಾಲಹಳ್ಳಿ, ಪಿ.ಹೊಸಹಳ್ಳಿ, ಪಂಪ್‌ಹೌಸ್, ಬೆಳಗೊಳ, ಹುಲಿಕೆರೆ ಮಾರ್ಗವಾಗಿ ರಥಯಾತ್ರೆ ಅಂತಿಮವಾಗಿ ಕೆಆರ್‌ಎಸ್ ತಲುಪಲಿದೆ. ಅಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶಾಲೆ ಅಥವಾ ಕಾಲೇಜಿನ ಸರ್ಕಾರಿ ಕಟ್ಟಡದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ರಾತ್ರಿ ವಾಸ್ತವ್ಯದ ಸ್ಥಳವನ್ನು ಕೆಲ ದಿನಗಳಲ್ಲಿ ನಿಗದಿಪಡಿಸಲಾಗುವುದು. ರಥಯಾತ್ರೆ ಸಾಗುವ ಮಾರ್ಗದ ಗ್ರಾಮಗಳ ಪ್ರಮುಖ ವೃತ್ತಗಳಲ್ಲಿ ಯೋಜನೆ ಕುರಿತು ಎಚ್.ಡಿ.ಕುಮಾರಸ್ವಾಮಿ ಮಾತನಾಡಲಿದ್ದಾರೆ ಎಂದರು.


ಇಂದು ಸಭೆ: ಪಂಚರತ್ನ ರಥಯಾತ್ರೆ ಆಗಮನ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಸಂಬಂಧ ಚರ್ಚಿಸಲು ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಡಿ.20ರಂದು ಜೆಡಿಎಸ್ ಪಕ್ಷದ 6 ಹೋಬಳಿಗಳ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪೈ.ಮುಕುಂದ ತಿಳಿಸಿದರು.
ಕಾರ್ಯಾಧ್ಯಕ್ಷ ಶಿವಸ್ವಾಮಿ, ಪುರಸಭೆ ಸದಸ್ಯ ಎಸ್.ಪ್ರಕಾಶ್, ಎಸ್.ಟಿ.ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net