

ಚಿತ್ರದುರ್ಗ:ಪೊಲೀಸ್ ಇಲಾಖೆಯ 8ನೇ ತಂಡದ ನಾಗರಿಕ,3ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು 1ನೇ ತಂಡದ ಜೈಲ್‌ವಾರ್ಡರ್‌ಗಳ ನಿರ್ಗಮನ ಪಥ ಸಂಚಲನ ಸೆ.23ರಂದು ಬೆಳಗ್ಗೆ 9ಕ್ಕೆ ಐಮಂಗಲದ ಪೊಲೀಸ್ ತರಬೇತಿ ಶಾಲೆ ಪೊಲೀಸ್ ಕವಾಯಿ ತು ಮೈದಾನದಲ್ಲಿ ಏರ್ಪಡಿಸಲಾಗಿದೆ. ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ರಮೇಶ್ ಬಾನೋತ್ ಅವರು ಪಥಸಂಚಲನ ಪರಿವೀಕ್ಷಿಸಿ,ಬಹುಮಾನ ವಿತರಿಸುವರು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಉಪಸ್ಥಿತರಿರುವರು ಎಂದು ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ ತಿಳಿಸಿದ್ದಾರೆ.