23ರಂದು ತೆರೆಗೆ ಧೈರ್ಯಂ ಸವತ್ರ ಸಾಧನಂ

CTD CINMA--003
Published on

ಚಿತ್ರದುರ್ಗ: ತಂದೆ ತ್ಯಾಗದ ಕಥೆಯ, ಧೈರ್ಯುಂ ಸವತ್ರ ಸಾಧನಂ ಚಿತ್ರ, ಫೆ.23ರಂದು ರಾಜ್ಯದ ವಿವಿಧೆಡೆ ಬಿಡುಗಡೆ ಆಗಲಿದೆ ಎಂದು ಸಿನಿಮಾದ ನಾಯಕ ನಟ ವಿವಾನ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಕ್ಕಳಿಗೆ ತಾಯಿ ಮಾಡುವ ತ್ಯಾಗದ ಅನೇಕ ಸಿನಿಮಾಗಳು ತೆರೆ ಕಂಡಿವೆ, ಆದರೆ ಈ ಚಿತ್ರ ಮಗನಿಗೆ ತಂದೆ ಮಾಡುವ ತ್ಯಾಗದ ಕಥೆಯನ್ನು ಹೇಳುತ್ತದೆ. ಇದರೊಂದಿಗೆ ಬಲಾಢ್ಯರು ಯಾವ ರೀತಿ ಬಡವ ರನ್ನು ತುಳಿಯುತ್ತಾರೆ,ನಮ್ಮ ಮುಂದೆ ಯಾರೂ ಬೆಳೆಯಬಾರದು,ಶಿಕ್ಷಣ ಪಡೆಯಬಾರದೆಂದೆಲ್ಲ ಶಿಕ್ಷಿಸುತ್ತಾರೆ ಎಂಬುದನ್ನು ತೋರಿಸಲಾಗಿ ದೆ. ಗನ್‌ನಿಂದ ಹೋರಾಡುವ ಬದಲು ಪೆನ್‌ನಿಂದ ಸಮಾಜ ತಿದ್ದುವ ಕೆಲಸವಾಗಬೇಕಿದೆ.
ತುಮಕೂರು ಜಿಲ್ಲೆ ಕೂರಟಗೆರೆಯಲ್ಲಿ 1960ರಲ್ಲಾಗಿದ್ದ ಸತ್ಯ ಘಟನೆ ಆಧರಿಸಿದ ಈ ಚಿತ್ರವನ್ನು ನಿರ್ದೇಶಕ ಸಾಯಿರಾಂ ಅವರು ನಿರ್ದೇ ಶಿಸಿದ್ದಾರೆ. ತುರುವಕೇರೆ,ಶಿವಮೊಗ್ಗದಲ್ಲಿ ಚಿತ್ರಿಕರಣ ಮಾಡಲಾಗಿದೆ ಎಂದರು. ಮದಕರಿನಾಯಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗೋಪಾಲ ಸ್ವಾಮಿನಾಯಕ್,ಅರ್ಜುನ್‌ಪಾಳೇಗಾರ್,ರಮಾನಾಯಕ್,ಕೇಶವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net