

ಬೀದರ್: ನಿರಂಜನ್ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಸ್ಪರ್ಧಾ ಗುರು ಐ.ಎ.ಎಸ್. ಆ್ಯಂಡ್ ಕೆ.ಎ.ಎಸ್. ಸ್ಟಡಿ ಸೆಂಟರ್ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿನ ಬೆಲ್ದಾಳೆ ಪೆಟ್ರೋಲ್ ಬಂಕ್ ಹಿಂದುಗಡೆಯ ಬಸವ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಜುಲೈ 23 ರಂದು ಬೆಳಿಗ್ಗೆ 10.30ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ), ಪ್ರೌಢಶಾಲಾ ಶಿಕ್ಷಕ, ಪಿಡಿಒ, ಎಫ್‍ಡಿಎ ಹಾಗೂ ಎಸ್‍ಡಿಎ ನೇಮಕಾತಿ ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಟಿಇಟಿಯ 150 ಅಂಕಗಳ ಉಚಿತ ಮಾದರಿ ಪರೀಕ್ಷೆಯೂ ನಡೆಯಲಿದೆ ಎಂದು ಸೆಂಟರ್ ಮುಖ್ಯಸ್ಥ ಅಮಿತ್ ಸೋಲಪುರ ತಿಳಿಸಿದ್ದಾರೆ.
ಶಿಕ್ಷಕ ಹುದ್ದೆಗೆ ಆಯ್ಕೆಯಾದವರು ಹಾಗೂ 2022 ರ ಟಿಇಟಿಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಕಾರ್ಯಾಗಾರದ ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 8105332701 ಅಥವಾ 8105327282 (ರಮೇಶ ಮರ್ಜಾಪುರ)ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.