ಹಸೆಮಣೆ ಏರಿದ 42 ಜೋಡಿಗಳು

kon may 08(1)
Published on

ಕೊಕ್ಕರ್ಣೆ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ ನಡೆದ 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 42 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಉಡುಪಿ ಜಿಲ್ಲೆಯ 36, ಶಿವಮೊಗ್ಗದ 4, ಚಿಕ್ಕಮಗಳೂರಿನ 2 ಜೋಡಿ ಸೇರಿದಂತೆ ಒಟ್ಟು 42 ಜೋಡಿಗಳು ಹಸೆಮಣೆ ಏರಿದರು. ವಧು ವರರಿಗೆ ಕರಿಮಣಿ ಸರ, ಧಾರೆ ಸೀರೆ, ಹೂವಿನ ಹಾರ ಮತ್ತು ಕುರ್ತಾ ಪೈಜಾಮವನ್ನು ದೇವಳ ವತಿಯಿಂದ ನೀಡಲಾಯಿತು. ಶ್ರೀಪತಿ ಅಡಿಗ ಮತ್ತು ಅರ್ಚಕರಿಂದ ಧಾರ್ಮಿಕ ವಿಧಾನ ನೆರವೇರಿತು. ಸರ್ಕಾರದ ಆದರ್ಶ ವಿವಾಹ ಯೋಜನೆಯಡಿ ವಧುವಿಗೆ ಸರ್ಕಾರದ ಪ್ರೋತ್ಸಾಹಧನ ಪಡೆಯಲು ವಿವಾಹ ನೋಂದಣಿ ಮಾಡಿಸಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಶಾಸಕ ಕಿರಣ್ ಕುವಾರ್ ಕೊಡ್ಗಿ, ಆನುವಂಶಿಕ ಮೊಕ್ತೇಸರ ಎಚ್.ಪ್ರಭಾಕರ ಶೆಟ್ಟಿ, ಆರ್.ಶ್ರೀನಿನಾಸ ಶೆಟ್ಟಿ, ಎಚ್.ಶಂಭು ಶೆಟ್ಟಿ, ಜಯರಾಮ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಶೇಡಿಕೊಡ್ಲು ವಿಠಲ್ ಶೆಟ್ಟಿ, ಭಾಸ್ಕರ ಶೆಟ್ಟಿ ಶೇಡಿಕೊಡ್ಲು, ಕೆ.ಗಣಪಯ್ಯ ಶೆಟ್ಟಿ, ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮೇಲ್ವಿಚಾರಕಿ ವಾಲತಿ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಶರತ್ ಶೆಟ್ಟಿ ದೇವಳ ಸಿಬ್ಬಂದಿ, ವಧು, ವರರ ಕಡೆಯವರು, ಭಕ್ತರು ಪಾಲ್ಗೊಂಡರು. ಇಂಜಿನಿಯರ್ ಪ್ರದೀಪ್ ಶೆಟ್ಟಿ, ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net