

ಮಸ್ಕಿ: ಹಾಲಪೂರ ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ನಷ್ಟವಾದ ಭತ್ತದ ಬೆಳೆಯನ್ನು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಸೋಮವಾರ ವೀಕ್ಷಿಸಿದರು.
ತೋರಣದಿನ್ನಿ, ಹಿರೇದಿನ್ನಿ, ತಾಯಮ್ಮ ಕ್ಯಾಂಪ್, ಮರಕಮದಿನ್ನಿ, ಮಲ್ಕ ಪೂರ ಗ್ರಾಮಗಳ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.
ಹಾಲಪೂರ ಹೋಬಳಿಯಲ್ಲಿ 2,396 ಹೆಕ್ಟೇರ್ ಪ್ರದೇಶವು ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಕಂದಾಯ ಮತ್ತು ಕೃಷಿಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸರ್ವೇ ನಡೆಸುವಂತೆ ಸೂಚಿಸಿದ್ದಾರೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಮಾಹಿತಿ ನೀಡಿದರು.
ತಹಸೀಲ್ದಾರ್ ಮಲ್ಲಪ್ಪ ಯರಗೋಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿ, ತಾಪಂ ಮಾಜಿ ಸದಸ್ಯ ಕರೆಯಪ್ಪ, ಪ್ರಮುಖರಾದ ಶರಣಪ್ಪ ಇಟಗಿ, ಮಾರೆಪ್ಪ ಸಾಹುಕಾರ ಇತರರಿದ್ದರು.