239 ಕೋವಿಡ್ ಪ್ರಕರಣ ಪತ್ತೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 239 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 7383ಕ್ಕೇರಿದ್ದು, ಈವರೆಗೆ 4638 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2516 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 229 ಜನ ಮೃತಪಟ್ಟಿದ್ದಾರೆ.

ಶನಿವಾರದ ಪ್ರಯೋಗಾಲಯ ವರದಿಯಲ್ಲಿ ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ಸೇರಿ ಸುಮಾರು 65 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಧಾರವಾಡ ಶಹರ ಹಾಗೂ ಗ್ರಾಮಾಂತರ ಸೇರಿ 35 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದೆ. ಕೆಲ ಪ್ರದೇಶಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ, ಗಂಭ್ಯಾಪುರ, ತುಮರಿಕೊಪ್ಪ, ಮಲ್ಲನಕೊಪ್ಪ, ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಹತ್ತಿರ, ಶಿರೂರ, ಕಡಪಟ್ಟಿ ಗ್ರಾಮದ ಬಸವಣ್ಣ ಗುಡಿ ಹತ್ತಿರ, ದ್ಯಾವನೂರ, ನವಲಗುಂದ ತಾಲೂಕಿನ ಭಂಜತ್ರಿ ಓಣಿ, ಭೋವಿ ಓಣಿ, ಇಬ್ರಾಹಿಂಪುರ, ಶಾನವಾಡ, ತಿರ್ಲಾಪುರ, ದಾಟನಾಳ, ಮೊರಬ, ಅಣ್ಣಿಗೇರಿಯ ಲಿಂಬಿಕಾಯಿ ಓಣಿ, ದೇಶಪಾಂಡೆ ಪ್ಲಾಟ್ ಹತ್ತಿರ ಪ್ರಕರಣಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net