ಉತ್ತರ ಕನ್ನಡ ಜಿಲ್ಲೆಗೆ 23,522 ‘ಆವಾಸ್’ ಮನೆ ಮಂಜೂರು

Kageri (1)
Published on

ಶಿರಸಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಗ್ರಾಮೀಣ ನಿವೇಶನ ರಹಿತ ಜನರಿಗೆ 23,522 ಮನೆಗಳು ಮಂಜೂರಾಗಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಅತ್ಯಧಿಕ ಮನೆಗಳು ಮಂಜೂರಾಗಿರುವುದು ಸಂತಸ ತಂದಿದೆ. ಎಲ್ಲ ಪಂಚಾಯಿತಿಗಳು ಶೀಘ್ರವೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಗ್ರಾಮೀಣ ಭಾಗದ ಬಡ ಜನರಿಗೆ ವಸತಿ ಕಲ್ಪಿಸಿ ಅನುಕೂಲ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕಾಳಜಿಯಿಂದಾಗಿ ಜಿಲ್ಲೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮನೆಗಳು ಬಂದಿವೆ ಎಂದಿದ್ದಾರೆ.

ಯಾವ ತಾಲೂಕಿಗೆ ಎಷ್ಟು ಮನೆ?: ಅಂಕೋಲಾ ತಾಲೂಕಿಗೆ 2250, ಭಟ್ಕಳ 2769, ದಾಂಡೇಲಿ 449, ಹಳಿಯಾಳ 1787, ಹೊನ್ನಾವರ 3426, ಕಾರವಾರ 1910, ಕುಮಟಾ 2997, ಮುಂಡಗೋಡ 2153, ಸಿದ್ದಾಪುರ 1140, ಶಿರಸಿ 2877, ಜೊಯಿಡಾ 588 ಹಾಗೂ ಯಲ್ಲಾಪುರ ತಾಲೂಕಿಗೆ 1176 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಕಾಗೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net