ಹೈಕೋರ್ಟ್ ಲೋಕ ಅದಾಲತ್‌ನಲ್ಲಿ 235 ಪ್ರಕರಣ ಇತ್ಯರ್ಥ

web 66
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಹೈಕೋರ್ಟ್ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ್ ನೇತೃತ್ವದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ನ್ಯಾಯಮೂರ್ತಿಗಳಾದ ಜೆ.ಎಂ. ಖಾಜಿ ಮತ್ತು ಟಿ.ಜಿ. ಶಿವಶಂಕರೇಗೌಡ ಹಾಗೂ ಸದಸ್ಯರಾದ ಎಂ.ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ.ಜಿ. ದಳವಾಯಿ ಅವರಿದ್ದ 3 ಪೀಠಗಳನ್ನು ಆಯೋಜಿಸಲಾಗಿತ್ತು. ಅದಾಲತ್‌ನಲ್ಲಿ 500 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿ  ಮತ್ತು ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net