

ಬಸವಕಲ್ಯಾಣ: ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ತಾಲೂಕು ವಕೀಲ ಸಂಘದ ಸುವರ್ಣ ಮಹೋತ್ಸವ ನಿಮಿತ್ತ ತಾಲೂಕು ವಕೀಲರ ಸಂಘ, ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ, ಸಕರ್ಾರಿ ಆಸ್ಪತ್ರೆ, ಪಾಟೀಲ್ ಆಸ್ಪತ್ರೆ ಹಾಗೂ ಮೂಕಾಂಬಿಕಾ ಆಸ್ಪತ್ರೆ ಸಹಯೋಗದೊಂದಿಗೆ ನ್ಯಾಯಾಲಯದ ಅವರಣದಲ್ಲಿ ಸೋಮವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ಬೂಸ್ಟರ್ ಡೋಸ್ ಹಾಕುವ ಕಾರ್ಯಕ್ರಮ ನಡೆಯಿತು.
233 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 70 ಜನರಿಗೆ ಇಸಿಜಿ, 100 ಜನರ ನೇತ್ರ ತಪಾಸಣೆ ನಡೆದರೆ, 53 ಜನರಿಗೆ ಕರೊನಾ ಬೂಸ್ಟರ್ ಡೋಸ್ ನೀಡಲಾಗಿದೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪನವರ್ ಚಾಲನೆ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಂಗವ್ವ ಅಯಟ್ಟಿ, ಸಿವಿಲ್ ನ್ಯಾಯಾಧೀಶ ಭರತ್ ಯೋಗೇಶ ಕರಗುದರಿ, ಖ್ಯಾತ ವೈದ್ಯರಾದ ಡಾ.ಸದಾನಂದ ಪಾಟೀಲ್, ಡಾ.ಶ್ರೀನಿವಾಸ ಕಳ್ಳಿಗುಡ್ಡಿ, ಡಾ.ಸ್ಮೀತಾ ಕಳ್ಳಿಗುಡ್ಡಿ, ದೀಪಕ ಪಾಟೀಲ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಕಾರ್ಯದಶರ್ಿ ಎಸ್.ಬಿ.ಮಾಶಾಳಕರ್, ಉಪ ಕಾರ್ಯದಶರ್ಿ ಜಿ.ಎಂ.ಸಾಗರ, ಖಜಾಂಚಿ ಸುರೇಶ ಕಾಟೆ ಇತರರಿದ್ದರು.