

ಚಿತ್ರದುರ್ಗ: ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು. ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಕಷ್ಣ ಜನ್ಮಾಷ್ಟಮಿ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕೃಷ್ಣ ವ್ಯಕ್ತಿಯಲ್ಲ,ಶಕ್ತಿ.ಶ್ರೀ ಕೃಷ್ಣನ ಲೀಲೆಯನ್ನು ವರ್ಣಿಸಲು ಅಸಾಧ್ಯ. ಕೃಷ್ಣನ ಜೀವನ ಚರಿತ್ರೆ ಹಾಗೂ ಮೌಲ್ಯಗಳನ್ನು ಪಾಲಿಸಬೇಕಿದೆ. ಜಾತಿ,ಧರ್ಮದ ತಾರತಮ್ಯವಿಲ್ಲದೆ,ಸಹೋದರತ್ವ,ಸಹಬಾಳ್ವೆಯಿಂದ ಎಲ್ಲರೂ ಬಾಳ ಬೇಕಿದೆ ಎಂದರು.
ಒಂದರಿಂದ 5ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ,6ರಿಂದ 10 ನೇ ತರಗತಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಬೆಣ್ಣೆ ತುಂಬಿದ ಮಡಿಕೆ ಒಡೆದು ಸಂಭ್ರಮಿಸಿದರು. ಸಂಸ್ಥೆ ಸಂಯೋಜಕ ಆರ್.ಎಸ್.ರಾಜು,ಶಿಕ್ಷಣ ವೀಕ್ಷಕ ನಾಗಭೂಷಣಶೆಟ್ಟಿ,ಶಿಕ್ಷಣ ಸಂಯೋಜಕ ಕೊಟ್ರೇಶ್,ನೃತ್ಯ ತರಬೇತಿ ಶಿಕ್ಷಕ ಅಂಜನ್,ಶಿಕ್ಷಕಿ ವೈಷ್ಣವಿ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. ನೂರಾರು ಮಕ್ಕಳು ಶ್ರೀ ಕೃಷ್ಣನ ವೇಷಧಾರಿಗಳಾಗಿ ಕಂಗೊಳಿಸಿದರು.