

ಚಿತ್ರದುರ್ಗ: ನಗರದ ಮುಖ್ಯ ರಸ್ತೆಗಳನ್ನು ವಿಸ್ತರಿಸಿ ಫುಟ್‌ಪಾತ್ ನಿರ್ಮಿಸಬೇಕು. ತರಾಸು ರಂಗಮಂದಿರದ ಶೌಚಗೃಹ ಹಾಳಾಗಿದ್ದು, ದುರಸ್ತಿಗೆ ಮುಂದಾಗಬೇಕು. ರಾಜಕಾಲುವೆಗಳು ಒತ್ತುವರಿಯಾಗಿದ್ದು, ತೆರವಿಗೆ ನಗರಸಭೆ ಕ್ರಮಕೈಗೊಳ್ಳಬೇಕು. ಆರ್‌ಒ ಘಟಕಗಳನ್ನು ಸರಿಪಡಿಸಬೇಕು ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ನಡೆದ ಜನತಾ ದರ್ಶನದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಮನವಿ ಸಲ್ಲಿಸಿದರು.
ವಿವಿಧ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ, ಜಮೀನಿನ ಸರ್ವೇ ಮಾಡಿಕೊಡುವುದು, ನಿವೇಶನ, ವಸತಿ ಸೌಲಭ್ಯ ಸೇರಿ ಸಾರ್ವಜನಿಕರಿಂದ 230ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು.