

ತಿಪಟೂರು: ವಸತಿ ಯೋಜನೆಯ ಹಕ್ಕುಪತ್ರ ಪಡೆದು ಇದುವರೆಗೆ ಮನೆ ನಿರ್ಮಿಸದೇ ಇರುವವರ ಸಂಖ್ಯೆ 23 ಸಾವಿರ ಎಂಬ ಆಘಾತಕಾರಿ ಅಂಶ ಬಿಚ್ಚಿಟ್ಟ ಜಿಪಂ ಸಿಇಒ ವಿದ್ಯಾಕುಮಾರಿ, ಅಕ್ಟೋಬರ್ ಒಳಗೆ ಮನೆ ನಿರ್ಮಾಣ ಪೂರ್ಣಗೊಳಿಸಿ, ಜಿಲ್ಲೆಯನ್ನು ಕಳಂಕದಿಂದ ಮುಕ್ತ ಮಾಡಿ ಎಂದರು.
ನಗರದ ಕಲ್ಪತರು ತಾಂತ್ರಿಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2021&22 ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗಳ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಅಂತ್ಯದೊಳಗೆ ಇಡೀ ದೇಶದಲ್ಲಿ ಸರ್ವರೂ ಸ್ವಂತ ಸೂರು ಹೊಂದಿರಬೇಕೆಂಬ ಕೇಂದ್ರದ ಮಹಾತ್ವಾಕಾಂ ಯೋಜನೆ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಬಸವ ವಸತಿ ಯೋಜನೆ, ಮತ್ತು ಡಾ, ಅಂಬೇಡ್ಕರ್ ವಸತಿ ಯೋಜನೆಯಡಿ, ಸ್ವಂತ ಸೂರಿಲ್ಲದವರು ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅಗತ್ಯ ಧನ ಸಹಾಯ ನೀಡಲಾಗುತ್ತಿದೆ. ಆದರೆ ಯೋಜನೆ ಜಾರಿಗೆ ಬಂದ 2010 ರಿಂದ 2022ರ ವರೆಗೂ ಮನೆ ನಿರ್ಮಾಣದ ಹಕ್ಕು ಪಡೆದ ಸುಮಾರು 23 ಸಾವಿರ ಮಂದಿ ಇಲ್ಲಿವರೆಗೂ ಮನೆ ನಿರ್ಮಿಸಿಕೊಂಡಿಲ್ಲದ ಪರಿಣಾಮ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದರು.
ಒಂದು ಮನೆ ನಿರ್ಮಾಣದ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ಪಡೆಯುವ ಕಷ್ಟ ನಮಗೆ ಗೊತ್ತು. ಸ್ವತ@ ಮುಖ್ಯ ಮಂತ್ರಿಗಳು ಈ ನಿಟ್ಟಿನಲ್ಲಿ ಆದೇಶ ನೀಡಿದ್ದು, ಅಕ್ಟೋಬರ್ ಒಳಗೆ ಯೋಜನೆ ಸದುಪಯೋಗಪಡಿಸಿಕೊಂಡು ಕಪ್ಪು ಪಟ್ಟಿಯಿಂದ ಹೊರಬನ್ನಿ, ಜತೆಗೆ ನಿಮ್ಮಂತೆಯೆ ಸ್ವಂತ ಸೂರು ಹೊಂದುವ ಆಕಾಂಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ನಮ್ಮ ಜಿಲ್ಲೆಗೆ ದಕ್ಕಿರುವ ಯೋಜನೆ ಅನ್ಯ ಜಿಲ್ಲೆಯ ಪಾಲಾಗಿ ನಷ್ಟದ ಜತೆಗೆ ತಾಲೂಕು ಹಾಗೂ ಜಿಲ್ಲೆಗೇ ಕೆಟ್ಟ ಹೆಸರು ಬರಲಿದೆ ಎಂದರು.
ಇಒ ಎಚ್.ಎಂ.ಸುದರ್ಶನ್, ತಾಲೂಕು ಆಡಳಿತಾಧಿಕಾರಿ ಟಿ.ಎನ್.ಅಶೋಕ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಕೇಶವ ಇದ್ದರು.
ಮನೆ ನಿರ್ಮಾಣ ಕಾರ್ಯ ಪೂರ್ಣ ಮಾಡಿ: ತಾಲೂಕಿನಲ್ಲಿ ಮಂಜೂರಾದ 3922 ಬಸವ ವಸತಿ ಯೋಜನೆಯ ಮನೆ ನಿರ್ಮಾಣದ ಪೈಕಿ ಮುಕ್ತಾಯವಾಗಿರುವುದು ಕೇವಲ 1022 ಮಾತ್ರ. ಇನ್ನು ಮುಂದಾದರೂ ಪೂರ್ಣ ಪ್ರಮಾಣದಲ್ಲಿ ಮನೆ ನಿರ್ಮಿಸುವ ಮೂಲಕ ಇನ್ನೂ ಹೆಚ್ಚಿನ ಯೋಜನೆಗಳು ಬರಲು ಅವಕಾಶ ಮಾಡಿಕೊಡಿ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಬಸವ ವಸತಿ ಯೋಜನೆಯಡಿ 732 ಅರ್ಜಿಗಳ ಪೈಕಿ 571 , ಹಾಗೂ ಡಾ, ಅಂಬೇಡ್ಕರ್ ಯೋಜನೆಯಡಿ 238 ರಲ್ಲಿ 175 ಮಂದಿಯನ್ನು ವಸತಿ ಯೋಜನೆಗೆ ಗುರುತಿಸಲಾಗಿದೆ. ದಿನಗೂಲಿ 309 ರ ಲೆಕ್ಕದಲ್ಲಿ 90 ಮಾನವ ದಿನಗಳನ್ನು ಎನ್.ಆರ್.ಇ.ಜಿ ಮೂಲಕ ಸದ್ಬಳಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಸಾಮಾನ್ಯ ವರ್ಗದವರಿಗೆ ನಾಲ್ಕು ಕಂತುಗಳಲ್ಲಿ ತಲಾ 30 ಸಾವಿರದಂತೆ ಒಟ್ಟು 1.20 ಲಕ್ಷ. ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ತಲಾ 43,750 ರಂತೆ ಒಟ್ಟು 1.75 ಲಕ್ಷ ಸಹಾಯಧನ ದೊರೆಯಲಿದೆ. 6 ತಿಂಗಳ ಒಳಗೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ನೀಡಲಾಗಿದೆ ಎಂದರು.
ಯೋಜನೆ ಕೈತಪ್ಪದಿರಲಿ: ಮನೆ ನಿರ್ಮಾಣದ ನಾಲ್ಕೂ ಹಂತಗಳು ಸೂಕ್ತ ರೀತಿಯಲ್ಲಿ ಜಿ.ಪಿ.ಎಸ್. ಆಗಬೇಕು. ಪಿಡಿಒಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ನನ್ನ ಗಮನಕ್ಕೆ ತನ್ನಿ. 2023ರ ಡಿಸೆಂಬರ್ ಅಂತ್ಯದೊಳಗೆ ಪ್ರತಿ ಗ್ರಾಮಸ್ಥರಿಗೂ ಕುಡಿಯುವ ನೀರು ಕೊಡುವ ಜಲ ಜೀವನ್ ಮಿಷನ್ಗೆ ಇಡೀ ತಿಪಟೂರು ತಾಲೂಕನ್ನು ಗುರುತಿಸಲಾಗಿದೆ. ವರ್ಷಾಂತ್ಯಕ್ಕೆ ಕಾಮಗಾರಿಗೆ ಟೆಂಡರ್ ನೀಡಲಿದ್ದು, ಇದಕ್ಕೂ ಮುಂಚೆ ತಾಲೂಕಿನ ಯಾವುದೇ ಗ್ರಾಮದ ರಸ್ತೆ, ಅಥವಾ ಮನೆಗಳು ಯೋಜನೆಯಿಂದ ಕೈ ತಪ್ಪಬಾರದೆಂದು ಡಿ.ಪಿ.ಆಎರ್. ಅನ್ನು ಪ್ರತಿ ಗ್ರಾಮ ಪಂಚಾಯಿತಿಗೆ ಕಳಿಸಲಾಗುತ್ತೆ. ಡಿ.ಪಿ.ಆರ್ ನಲ್ಲಿ ತಪ್ಪಾಗಿದ್ದರೆ ಸರಿಪಡಿಸಿ 2&3 ದಿನದೊಳಗೆ ವಾಪಸ್ ಕಳಿಸಬೇಕು ಎಂದು ಜಿಪಂ ಸಿಇಒ ವಿದ್ಯಾ ಕುಮಾರಿ ತಿಳಿಸಿದರು.
ಆಯೋಜನೆ ಅವ್ಯವಸ್ಥೆ: ಕಾರ್ಯಕ್ರಮಕ್ಕೆ ಸೂಕ್ತ ಏರ್ಪಾಟು ಮಾಡಿಕೊಳ್ಳದೆ ಆಸನಗಳ ವ್ಯವಸ್ಥೆ ಇರಲಿಲ್ಲ. ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಕವಿತಾ, ಹಾಲ್ಕುರಿಕೆ ಗ್ರಾಪಂ ಸದಸ್ಯ ಬಸವರಾಜು ಸೇರಿ ಅನೇಕ ಗ್ರಾಪಂ ಸದಸ್ಯರು, ಮತ್ತು ಕೆಲ ಅಧ್ಯಕ್ಷರು ನೆಲದ ಮೇಲೆ ಕುಳಿತಿದ್ದು ಕಂಡು ಬಂತು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ರಾಜ್ಯ ಸುಭಿಕ್ಷ$ವಾವಾಗಿದೆ. ಇದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಮಾರಂಭವಲ್ಲ. ಯೋಜನೆ ಪಾರದರ್ಶಕವಾಗಿರಲಿ ಎಂದು ಗ್ರಾಮ ಸಭೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮೋದಿ ಸರ್ಕಾರದಲ್ಲಿ ಯಾರಿಗೆ ಎಷ್ಟು, ಹೇಗೆ, ಸಿಗಬೇಕೋ ಅಷ್ಟೇ ಸಿಗಲಿದೆ. ಬಿ.ಸಿ. ನಾಗೇಶ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ