23 ವರ್ಷದ ನಂತರ ಮರಳಿ ಬಂದ ಮಗ!

8 GAJENDRAGAD 1
Published on

ಗಜೇಂದ್ರಗಡ: 2 ದಶಕಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಗೋಗೇರಿ ಗ್ರಾಮದ ಯುವಕನೊಬ್ಬ ಬುಧವಾರ ಮರಳಿ ಮನೆಗೆ ಬಂದಿದ್ದು ಕುಟುಂಬದಲ್ಲಿ ಸಂತಸ ಅರಳಿದೆ. ಗ್ರಾಮದ ಮಲಿಕ್​ಸಾಬ್ ಮತ್ತು ಬಡೀಮಾ ಬಾಗವಾನ ದಂಪತಿಯ ಮೂರನೇ ಮಗ ಆದಮ್ (40) ಸುಮಾರು 23 ವರ್ಷಗಳ ನಂತರ ಮತ್ತೆ ಹೆತ್ತವರನ್ನು ಸೇರಿದ್ದಾನೆ. ಮಾನಸಿಕ ಅಸ್ವಸ್ಥನಾಗಿ ಮನೆ ಬಿಟ್ಟು ಹೋಗಿದ್ದ ಆದಮ್ನ್ನು ಮತ್ತೆ ಕಂಡು ಮನೆ ಮಂದಿಗೆ ಖುಷಿಯಾಗಿದೆ. ಮಲಿಕ್​ಸಾಬ್ ಬಾಗವಾನ ಅವರಿಗೆ ನಾಲ್ವರು ಪುತ್ರರು, ಐವರು ಪುತ್ರಿಯರಿದ್ದಾರೆ. ಮನೋವ್ಯಾಧಿಯಿಂದ ಬಳಲುತ್ತಿದ್ದ ಆದಮ್ ತನ್ನ 17ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬೈಗೆ ಹೋಗಿದ್ದರು. ಅಲ್ಲಿ 7 ವರ್ಷವಿದ್ದು, ನಂತರ ಕೊಲ್ಲಾಪುರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು.

‘ಮನೆಬಿಟ್ಟು ಹೋಗಿದ್ದ ಮಗನಿಗಾಗಿ ತುಂಬಾ ಹುಡುಕಾಡಿದ್ದೆವು. ಕಂಡ ಕಂಡ ದೇವರಲ್ಲಿ ಹರಕೆ ಹೊತ್ತಿದ್ದೆವು. ಮಗ ಇದೀಗ ಮರಳಿ ಮನೆಗೆ ಬಂದಿದ್ದರಿಂದ ನಮ್ಮ ಕುಟುಂಬ ಪರಿಪೂರ್ಣವಾಗಿದೆ’ ಎನ್ನುತ್ತಾರೆ ತಂದೆ ಮಲಿಕ್​ಸಾಬ್ ಬಾಗವಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net