400 ದಾಟಿದ ದ.ಕ. ಸೋಂಕಿತರು

corona
Published on

ಮಂಗಳೂರು: ಜಿಲ್ಲೆಯಲ್ಲಿ ಕರೊನಾ ಓಟ ಮುಂದುವರಿದಿದ್ದು ಗುರುವಾರ ಒಟ್ಟು 23 ಪ್ರಕರಣಗಳು ವರದಿಯಾಗಿವೆ.

ಇದರಲ್ಲಿ 21 ಪ್ರಕರಣಗಳು ಸೌದಿಯಿಂದ ಹಿಂದಿರುಗಿದ ಪ್ರಯಾಣಿಕರು. ಇಬ್ಬರು ಈಗಾಗಲೇ ಸೋಂಕು ತಗಲಿದ್ದವರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು.

ಸದ್ಯ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 399ಕ್ಕೆ ಏರಿಕೆಯಾಗಿದೆ. ಇತರ ಜಿಲ್ಲೆಗಳ 10 ಪ್ರಕರಣಗಳನ್ನೂ ಸೇರಿಸಿದರೆ ದ.ಕ. ಜಿಲ್ಲೆಯ ಕೋವಿಟ್ ಪ್ರಕರಣಗಳ ಸಂಖ್ಯೆ 409ಕ್ಕೆ ಏರಿಕೆಯಾಗುತ್ತದೆ. ಸಕ್ರಿಯ ಪ್ರಕರಣಗಳಿರುವುದು 225 ಮಾತ್ರ. ಕರೊನಾ ಮುಕ್ತವಾದ 6 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದವರ ಒಟ್ಟು ಸಂಖ್ಯೆ 176.

ಉಡುಪಿಯಲ್ಲಿ ಶೂನ್ಯ

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಕರೊನಾ ಶಂಕಿತ 27 ಮಂದಿಯ ಮಾದರಿ ವರದಿ ನೆಗೆಟಿವ್ ಬಂದಿದ್ದು, 198 ವರದಿ ಬರಲು ಬಾಕಿ ಇದೆ.

ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 1, ಅನಾರೋಗ್ಯ ಪೀಡಿತ 6, ಹಾಟ್‌ಸ್ಪಾಟ್‌ಗೆ ಭೇಟಿ ನೀಡಿದ 51 ಮಂದಿ, ಕೋವಿಡ್ ಶಂಕಿತ 18, ಕರೊನಾ ಸಂಪರ್ಕ ಹೊಂದಿದ 31 ಸೇರಿ ಒಟ್ಟು 107 ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 12 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದು, 7 ಮಂದಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಕಂಡುಬಂದ 1039 ಪಾಸಿಟಿವ್ ಪ್ರಕರಣಗಳಲ್ಲಿ 946 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 92 ಮಂದಿ ಉಡುಪಿಯಲ್ಲಿ, ಓರ್ವ ದ.ಕ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮರಣ ಹೊಂದಿದ್ದಾರೆ.

ಕಾಸರಗೋಡಿನ ಮೂವರಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಮೂರು ಮಂದಿ ಒಳಗೊಂಡಂತೆ ಕೇರಳದಲ್ಲಿ 97 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ. ಕಣ್ಣೂರು ನಿವಾಸಿ, ಅಬಕಾರಿ ಇಲಾಖೆಯ ಮಟ್ಟನ್ನೂರು ಕಚೇರಿ ಉದ್ಯೋಗಿಯೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆಗೊಳಪಡಿಸಿದಾಗ ಕರೊನಾ ಸೋಂಕು ದೃಢಗೊಂಡಿತ್ತು. ಅವರು ಗುರುವಾರ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net