22ರಿಂದ ಜಿಲ್ಲಾ ಕ್ರೀಡಾಶಾಲೆಗೆ ಕ್ರೀಡಾಪಟುಗಳ ಆಯ್ಕೆ

CTD 17 Stadium--03
Published on

ಚಿತ್ರದುರ್ಗ: ವಾಲಿಬಾಲ್,ಅಥ್ಲೆಟಿಕ್ಸ್ ಪ್ರತಿಭಾವಂತ ಬಾಲಕ,ಬಾಲಕಿಯರಿಗೆ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾವಸತಿ ಶಾಲೆಗೆ ಪ್ರವೇಶಕ್ಕಾಗಿ ಮೇ 22ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷ 5ನೇ ತರಗತಿಗೆ ಸೇರಲು ಅರ್ಹ, 2023ರ ಜೂನ್ 1ಕ್ಕೆ 10 ವರ್ಷ ಮತ್ತು 11 ವರ್ಷ ಮೀರದ ಬಾಲಕ ಮತ್ತು ಬಾಲಕಿಯರು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ.

ಎಲ್ಲ ತಾಲೂಕು ಕೇಂದ್ರಗಳಲ್ಲಿ ನಿಗದಿತ ದಿನಂದು ಬೆಳಗ್ಗೆ 10ಗಂಟೆಗೆ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. 22ರಂದು ಮೊಳಕಾಲ್ಮೂರು ಸರ್ಕಾರಿ ಪಪೂ ಕಾಲೇಜು,23 ಚಳ್ಳಕೆರೆ,24ರಂದು ಹೊಳಲ್ಕೆರೆ,25 ರಂದು ಹೊಸದುರ್ಗ,26ರಂದು ಹಿರಿಯೂರು ತಾಲೂಕು ಕ್ರೀಡಾಂಗಣಗಳಲ್ಲಿ ಹಾಗೂ 27ರಂದು ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಹಾಗೂ ಇದೇ ಕ್ರೀಡಾಂಗಣದಲ್ಲಿ ಮೇ 29ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಮಟ್ಟ ಆಯ್ಕೆ ನಡೆಯಲಿದೆ.

ತಾಲೂಕು ಕೇಂದ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ 29ರಂದು ಚಿತ್ರದುರ್ಗದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಚಿತ್ರದುರ್ಗದ ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ (9611673475)ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಎಸ್.ಮಾಳಿ(9380889647)ಅವರನ್ನು ಸಂಪರ್ಕಿಸ ಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net