22ರಂದು ಮನೆ ಮನೆಗಳಲ್ಲಿ ದೀಪ ಹಚ್ಚೋಣ

Siddu Savadi, Vikasita Sankalpa Bharat Yatra, Gas Distribution,
ತೇರದಾಳ ಪಟ್ಟಣದ ಮಾರುಕಟ್ಟೆ ಭಾಗದಲ್ಲಿ ವಿಕಸನ ಭಾರತ ಯಾತ್ರೆಯಲ್ಲಿ ಉಚಿತ ಗ್ಯಾಸ್‌ಗಳನ್ನು ಶಾಸಕ ಸಿದ್ದು ಸವದಿ ವಿತರಿಸಿದರು. ಸದಾಶಿವ ಹೊಸಮನಿ, ಸುರೇಶ ಅಕ್ಕಿವಾಟ ಇತರರಿದ್ದರು.
Published on

ತೇರದಾಳ: ರಾಮಮಂದಿರವು ಕೇವಲ ದೇಶದ ಅಭಿಮಾನವಲ್ಲ. ಪ್ರಪಂಚದ ಅನೇಕ ರಾಷ್ಟ್ರಗಳು ಬೆಂಬಲಿಸಿರುವುದು ಹೆಮ್ಮೆಯ ವಿಷಯ. ಜ.22ರಂದು ಮನೆ ಮನೆಗಳಲ್ಲಿ ಪೂಜೆಗೈದು, ಪುಷ್ಪಾಲಂಕಾರ ಮಾಡಿ, ದೀಪಗಳನ್ನು ಹಚ್ಚೋಣ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಮಾರುಕಟ್ಟೆ ಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಕಸಿತ ಸಂಕಲ್ಪ ಭಾರತ ಯಾತ್ರೆ ಹಾಗೂ ಉಜ್ವಲ ಯೋಜನೆಯ ಗ್ಯಾಸ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ದೇಶದ ಸಮಗ್ರ ಅಭಿವೃದ್ಧಿ ಮತ್ತು ದೇಶದ ರಕ್ಷಣೆಯಲ್ಲಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಏಲೀನೋ ಉಪಗ್ರಹ ಮೂಲಕ ಸೂರ್ಯನ ಅಧ್ಯಯನ, ಜಲಜೀವನ ಮಿಷನ್ ಯೋಜನೆ, ದೇಶದ 50 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್, ದೇಶದ 10 ಕೋಟಿ ಕುಟುಂಬಗಳಿಗೆ ಗ್ಯಾಸ್ ವಿತರಣೆ, ಜನರಿಕ್ ಮೆಡಿಷಿನ್ ಸೌಲಭ್ಯ, ಆತ್ಮ ನಿರ್ಭರ ಯೋಜನೆ ಜತೆಗೆ ಪಡಿತರ ಅಂಗಡಿಯ ಐದು ಕೆಜಿ ಅಕ್ಕಿ ಮೋದಿ ಅವರ ಯೋಜನೆಯಾಗಿದೆ. ಕಾಶ್ಮಿರ ಉಳಿಸಿದ ಮಹಾನ್ ಸಾಧನೆ, ಐತಿಹಾಸಿಕ ರಾಮಮಂದಿರ ನಿರ್ಮಾಣಗಳಂತಹ ರಾಷ್ಟ್ರೀಯ ಕಾರ್ಯಗಳನ್ನು ಮಾಡಿದ್ದು ದೇಶದ ಧೀಮಂತ ನಾಯಕ ಮೋದಿ ಅವರಾಗಿದ್ದಾರೆ. ಬಾಂಬ್ ಸ್ಫೋಟಗಳು ನಿಂತಿದ್ದು, ಜನಜೀವನ ಬದುಕು ಸುಂದರವಾಗಿದೆ ಎಂದರು.

ರಾಮಣ್ಣ ಹಿಡಕಲ್, ಸದಾಶಿವ ಹೊಸಮನಿ, ಪ್ರಭಾಕರ ಭಾಗಿ, ಸುರೇಶ ಅಕ್ಕಿವಾಟ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಮಹಿಳೆಯರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net