

ಮೂಡಲಗಿ: ರಾಜ್ಯ ಬಣಜಿಗ ಸಮಾಜದ ೇಮಾಭಿವೃದ್ಧಿ ಸಂದ ಮೂಡಲಗಿ ತಾಲೂಕು ಟಕದ 16ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆ. 22ರಂದು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂದ ತಾಲೂಕು ಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕು ಟಕದ ಪ್ರಧಾನ ಕಾರ್ಯದರ್ಶಿ ಚಿದಾನಂದ ಶೆಟ್ಟರ ಮಾತನಾಡಿ, ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ, ಶಿವಾನಂದ ಶ್ರೀ ವಹಿಸುವರು. ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗಮಿಸುವರು. ಬಣಜಿಗ ಸಂದ ತಾಲೂಕು ಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಸಂಗಮನಾಥ ಲೋಕಾಪುರ ಉಪನ್ಯಾಸ ನೀಡುವರು. ಮಹಿಳಾ ಟಕದ ಅಧ್ಯೆ ಮಂಜುಳಾ ವಾಣಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಹಿರಿಯರನ್ನು, ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು ಎಂದರು.
ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಂದ ತಾಲೂಕು ಟಕದ ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಖಜಾಂಚಿ ಶಿವಾನಂದ ಗಾಡವಿ, ನಿರ್ದೇಶಕರಾದ ವಿರೂಪಾಕ್ಷ ಗಾಡವಿ, ಸಂತೋಷ ಅಂಗಡಿ, ವಿಶ್ವನಾಥ ಶೀಲವಂತ, ವೀರೇಶ ದುಗ್ಗಾಣಿ, ಸುಪ್ರೀತ ತಾಂವಶಿ, ಸಂಗಪ್ಪ ಅಂಗಡಿ, ಬಸವರಾಜ ಮಂಗಸೂಳಿ, ಬಾಲಶೇಖರ ಬಂದಿ, ಲಿಂಗಪ್ಪ ಗಾಡವಿ, ಶಿವಯೋಗೇಪ್ಪ ಸಬರದ, ಈರಣ್ಣ ಜಕಾತಿ ಇದ್ದರು.