22ರಂದು ಪುನ್ನಾಗ ಕವನ ಸಂಕಲನ ಬಿಡುಗಡೆ

Published on

ಮೈಸೂರು: ಸಿರಿಗನ್ನಡ ವೇದಿಕೆ ಮತ್ತು ವೆಂಕಟಗಿರಿ ಪ್ರಕಾಶನದ ಸಹಯೋಗದಲ್ಲಿ ಲೇಖಕಿ ಡಾ.ಸೌಗಂಧಿಕಾ ವಿ.ಜೋಯಿಸ್ ರಚನೆಯ ಪುನ್ನಾಗ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ನ.22ರಂದು ಆಯೋಜಿಸಲಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ.ನೀ.ಗಿರಿಗೌಡ ತಿಳಿಸಿದರು.

ಅಂದು ಬೆಳಗ್ಗೆ 10.30ಕ್ಕೆ ಹೋಟೆಲ್ ಗೋವರ್ಧನ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ಪುಸ್ತಕ ಬಿಡುಗಡೆಗೊಳಿಸುವರು. ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಸ್.ರಾಮಪ್ರಸಾದ್, ಗಾಯಕ ಶಶಿಧರ್ ಕೋಟೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂತರ ನಡೆಯುವ ಕವಿ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ.ಎಚ್.ಎ.ಪಾರ್ಶ್ವನಾಥ್, ಡಾ.ಎಸ್.ಪಿ.ಯೋಗಣ್ಣ, ಡಾ.ಭೇರ್ಯ ರಾಮಕುಮಾರ್, ಡಾ.ಲೀಲಾ ಪ್ರಕಾಶ್, ನಾಗರತ್ನ ಹೆಮ್ಮಿಗೆ, ಎಂ.ಬಿ.ಸಂತೋಷ್, ಪ್ರಭಾ ಶಾಸ್ತ್ರಿ, ರಂಗನಾಥ್, ಪ್ರಭಾ ಜೋಶುಪ್ರ, ಚಂಪಾ ಶಿವಣ್ಣ, ಎಂ.ಎಸ್.ಲಾವಣ್ಯ ಲಕ್ಷ್ಮೀ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಲೇಖಕಿ ಡಾ.ಸೌಗಂಧಿಕಾ ವಿ.ಜೋಯಿಸ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಸ್.ರಾಮಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net