22ರಂದು ಗೃಹ ನಿರ್ಮಾಣ ಸಹಕಾರಿ ಸಂಘದ ಸಭೆ

22ರಂದು ಗೃಹ ನಿರ್ಮಾಣ ಸಹಕಾರಿ ಸಂಘದ ಸಭೆ
Published on

ಹಾಸನ: ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಪ್ರಸಕ್ತ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆ ಸೆ.22ರಂದು ನಗರದ ಗುರು ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ.ವಿ.ಶಿವೇಗೌಡ ತಿಳಿಸಿದರು.
ಸೆ.22ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ವೇಳೆ ಹಿಂದಿನ ಜಮಾ ಖರ್ಚು ಮಂಡಿಸಿ ಅನುಮೋದನೆ ಪಡೆಯುವುದು ಹಾಗೂ 2024-25ನೇ ಸಾಲಿನ ಅಂದಾಜು ಆಯವ್ಯಯಕ್ಕೆ ಅನುಮೋದನೆ ಪಡೆಯುವುದು ಮತ್ತು ಸಂಘದ ಬೈಲಾ ತಿದ್ದುಪಡಿ ಮಾಡಿ ಅನುಮೋದನೆ ಪಡೆಯಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಭೆ ಬಳಿಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಆಹ್ವಾನ ತಲುಪದೆ ಇರುವ ಸಂಘದ ಸದಸ್ಯರು ಇದೇ ಆಹ್ವಾನ ಪತ್ರಿಕೆ ಎಂದು ತಿಳಿದು ಭಾಗವಹಿಸುವಂತೆ ಮನವಿ ಮಾಡಿದರು.
ನಾನು ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಹಿಂದಿನ ಆಡಳಿತ ಮಂಡಳಿ ಹಾಗೂ ನಿರ್ದೇಶಕರ ನಿರ್ಲಕ್ಷೃದಿಂದ ಸಂಘಕ್ಕೆ ಆಗಿರುವ ಲೋಪದೋಷ ಸರಿಪಡಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. ಮೊದಲಿಗೆ ಹಾಸನಾಂಬ ಬಡಾವಣೆ ನಿರ್ಮಾಣ ಸಂಬಂಧ ಹಿಂದಿನ ಅಧ್ಯಕ್ಷ ಬಿ.ಜೆ.ಬೋರೇಗೌಡ ಹಾಗೂ ಸೃಷ್ಟಿ ಗ್ರೂಪ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಬಿ.ಕೆ.ರಂಗಸ್ವಾಮಿ ಅವರ ನಡುವೆ ಆಗಿರುವ ನಿವೇಶನ ಹಂಚಿಕೆ ಒಪ್ಪದದಂತೆ ಹೆಚ್ಚುವರಿಯಾಗಿ ಪಾವತಿಸಿರುವ 23,25,020 ರೂ.ಗಳನ್ನು ಪಾವತಿಸಬೇಕು. ಉಚಿತ ನಿವೇಶನ ನೀಡಿ, ಸಂಘಕ್ಕೆ ಕಚೇರಿ ಕಟ್ಟಡ ನಿರ್ಮಿಸಿಕೊಡಬೇಕು ಹಾಗೆಯೇ ಅರಸೀಕೆರೆ ರಸ್ತೆಯ ದೊಡ್ಡಪುರ ಬಡಾವಣೆ ನಿವೇಶನ ಹಂಚಿಕೆ ವಿವಾದ ನ್ಯಾಯಾದಲ್ಲಿದ್ದು ಅದನ್ನು ಶೀಘ್ರ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಚಂದ್ರೇಗೌಡ, ಮಾಜಿ ಗೌರವಾಧ್ಯಕ್ಷ ನರಸಿಂಹೇಗೌಡ, ನಿರ್ದೇಶಕ ರವಿಕುಮಾರ್, ರಜಿನೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net