

ಯಾದಗಿರಿ: ನಗರ ಠಾಣೆ ಪಿಎಸ್‌ಐ ಜೆ.ಎಸ್. ಪರಶುರಾಮ ಸಾವಿಗೆ ಕಾರಣರಾದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮತ್ತು ಅವರ ಮಗ ಪಂಪಣ್ಣಗೌಡ ಅವರನ್ನು ಕೂಡಲೇ ಬಂಧಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವರಾದ ನರಸಿಂಹ ನಾಯಕ ಮತ್ತು ಎನ್.ಮಹೇಶ್, ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ನೇತೃತ್ವದಲ್ಲಿ ಪಕ್ಷದ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರು ನೇತಾಜಿ ಸರ್ಕಲ್ ಬಳಿ ಜಮಾಯಿಸಿ ಶಾಸಕ, ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪಿಎಸ್‌ಐ ಪರಶುರಾಮ ಸಾವಿಗೆ ಸಂಬAಧಿಸಿದAತೆ ಶಾಸಕ ಚನ್ನಾರಡ್ಡಿ ಪಾಟೀಲ್ ಮತ್ತು ಅವರ ಪುತ್ರನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದರೆ ಘಟನೆಯ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪಿಎಸ್‌ಐ ಸಾವಿಗೆ ಕಾರಣರಾದ ಶಾಸಕರಿಗೆ ನಿಮ್ಮೊಂದಿಗೆ ನಾವಿz್ದೆÃವೆ ಎಂದು ಹೇಳುವ ನಿಮ್ಮಂಥ ಸಿಎಂ ನಾನು ನೋಡೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕಾದರೂ ಮೃತರ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರನ್ನು ಕೂಡಲೇ ಸಂಪುಟದಿAದ ಕೈಬಿಡಬೇಕು. ಜನಪ್ರತಿನಿಧಿಗಳಿಗೆ ಅಗೌರವ ತೋರುವ ಜಿಲ್ಲಾಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
೩೦ ಲಕ್ಷ ರೂ. ಬೇಡಿಕೆ ಇಟ್ಟು ಜಾತಿನಿಂದನೆ ಮಾಡಿರುವ ಶಾಸಕರನ್ನು ಗೃಹ ಸಚಿವ ಡಾ.ಪರಮೇಶ್ವರ್ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿದ್ದು ನಾಚಿಕೆಗೇಡು. ಅಲ್ಲೇ ಡಿಜಿ ಅವರನ್ನು ಕರೆಸಿ ಬಂಧಿಸಲು ಸೂಚಿಸಬೇಕಿತ್ತು. ದಲಿತರ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಅವರನ್ನು ರಕ್ಷಿಸುವ ಕಾಳಜಿ ಎಳ್ಳಷ್ಟೂ ಇಲ್ಲ ಎಂದು ಗುಡುಗಿದರು.
ನಂತರ ಬಹಿರಂಗ ಸಭೆಯಲ್ಲಿ ಪಕ್ಷದ ನಾಯಕಿ ಲಲಿತಾ ಅನಪುರ, ಗುರು ಕಾಮಾ ಇತರರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಿಜೆಪಿ ಮಾಜಿ ಜಿ¯್ಲÁಧ್ಯP್ಷÀ ಡಾ.ಶರಣಭೂಪಾಲರಡ್ಡಿ ನಾಯ್ಕಲï, ಪ್ರಮುಖರಾದ ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ್, ಮಲ್ಲಪ್ಪ ಮೇಳಗಿ, ಪರಶುರಾಮ ಕುರಕುಂದಿ, ರಮೇಶಬಾಬು ಮುದ್ನಾಳ್, ಬಿ.ಎಂ. ಹಳ್ಳಿಕೋಟಿ, ರಾಜಾ ಹನುಮಪ್ಪ ನಾಯಕ, ಎಚ್.ಸಿ. ಪಾಟೀಲï, ಬಸವರಾಜಪ್ಪ ವಿಭೂತಿಹಳ್ಳಿ, ದೇವರಾಜ ನಾಯಕ, ಸುನೀತಾ ಚವ್ಹಾಣ್, ಮಲ್ಲಮ್ಮ ಹೊಸಪೇಟ, ಚಂದ್ರಕಲಾ ಮಡ್ಡಿ, ಭೀಮಾಶಂಕರ ಬಿಲ್ಲವ, ನಿಂಗಪ್ಪ ಹತ್ತಿಮನಿ, ರಮೇಶ ದೊಡ್ಮನಿ, ವಿಲಾಸ ಪಾಟೀಲï, ಹಣಮಂತ ಇಟಗಿ, ಸುರೇಶ ಅಂಬಿಗೇರ, ಸ್ವಾಮಿದೇವ ದಾಸನಕೇರಿ, ಮಂಜುನಾಥ ದಾಸನಕೇರಿ, ಶೇಖಪ್ಪ ದೊರಿ ಹೆಡಗಿಮದ್ರಾ, ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರಿಗೆ ಮನವಿಪತ್ರ ಸಲ್ಲಿಸಿ ಕೂಡಲೇ ಶಾಸಕ ಮತ್ತು ಅವರ ಪುತ್ರನನ್ನು ಬಂಧಿಸುವAತೆ ಪ್ರತಿಭಟನಾಕಾರರು ಆಗ್ರಹಿಸಿದರು. ವೃತ್ತದ ನಾಲ್ಕೂ ಕಡೆ ಸಂಚಾರ ತಡೆದಿದ್ದರಿಂದ ಕೆಲಕಾಲ ಸಾರ್ವಜನಿಕರು ಪರದಾಡಿದರು.