221 ಜನ ಗುಣ, 6 ಜನರ ಸಾವು

carona logo
Published on

ಹಾವೇರಿ: ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯ 17 ಉದ್ಯೋಗಿಗಳು ಸೇರಿ ಜಿಲ್ಲೆಯಲ್ಲಿ ಸೋಮವಾರ 150 ಜನರಿಗೆ ಕರೊನಾ ದೃಢಪಟ್ಟಿದೆ. 221 ಜನರು ಗುಣವಾಗಿದ್ದು, 6 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಈವರೆಗೆ 3,549 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 2,177 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 80 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,292 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 772 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 520 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಹಾವೇರಿ 79, ರಾಣೆಬೆನ್ನೂರ 29, ಹಾನಗಲ್ಲ 13, ಹಿರೇಕೆರೂರ ಹಾಗೂ ಬ್ಯಾಡಗಿ ತಾಲೂಕು ತಲಾ 9, ಶಿಗ್ಗಾಂವಿ 8, ಸವಣೂರ ತಾಲೂಕಿನ 3 ಜನರಿಗೆ ಸೋಮವಾರ ಸೋಂಕು ದೃಢಪಟ್ಟಿದೆ.

ಗುಣವಾದವರು: ರಾಣೆಬೆನ್ನೂರ 123, ಬ್ಯಾಡಗಿ 45, ಹಾವೇರಿ 20, ಶಿಗ್ಗಾಂವಿ 17, ಹಾನಗಲ್ಲ 10, ಸವಣೂರ 5, ಹಿರೇಕೆರೂರು ತಾಲೂಕಿನ ಒಬ್ಬರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

ಹಾವೇರಿಯ ದ್ಯಾಮವ್ವ ಗುಡಿ ಹತ್ತಿರದ 85 ವರ್ಷದ ಪುರುಷ, ಶಿವಾಜಿನಗರದ 44 ವರ್ಷದ ಪುರುಷ, ಶಿವಲಿಂಗ ನಗರದ 54 ವರ್ಷದ ಪುರುಷ, ತಾಲೂಕಿನ ಕಳ್ಳಿಹಾಳ ಗ್ರಾಮದ 50 ವರ್ಷದ ಪುರುಷ, ಗಣಜೂರ ಗ್ರಾಮದ 64 ವರ್ಷದ ಪುರುಷ, ಹಾನಗಲ್ಲ ತಾಲೂಕು ನರೇಗಲ್ಲ ಗ್ರಾಮದ 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net