ಮಾಲೂರು ಕ್ಷೇತ್ರ ಅಭಿವೃದ್ಧಿಗೆ 2,200 ಕೋಟಿ

08 mlr 01
Published on

ಮಾಲೂರು: ತಾಲೂಕಿನ ಅಭಿವೃದ್ಧಿಗೆ ಸರ್ಕಾರ 2,200 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ನಂಜೇಗೌಡ ತಿಳಿಸಿದರು. ತಾಲೂಕು ಕಾಂಗ್ರೆಸ್​ ಕಚೇರಿ ಆವರಣದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಕೇಕ್​ ಕತ್ತರಿಸಿ ಮಾತನಾಡಿದ ಶಾಸಕರು, ಪಟ್ಟಣದಲ್ಲಿ 3.5 ಕಿಮೀ ್ಲೆ$ ಓವರ್​, ನೂತನ ಬಸ್​ ನಿಲ್ದಾಣ, ಪಟ್ಟಣದ ದೊಡ್ಡ ಕೆರೆ ಪುನಶ್ಚೇತನ, ಸಾರ್ವಜನಿಕ ಹೊಸ ಆಸ್ಪತ್ರೆ ನಿರ್ಮಾಣ, ಮಾಸ್ತಿಯಲ್ಲಿ ಬಸ್​ ನಿಲ್ದಾಣ, ಐಟಿಐ ಕಾಲೇಜ್​ ಹಾಗೂ ರಸ್ತೆಗಳ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಕಾರ್ಯದರ್ಶಿ ಕೃಷ್ಣಪ್ಪ, ಮಾಜಿ ಶಾಸಕ ಎ.ನಾಗರಾಜ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ವಿಜಯನರಸಿಂಹ, ಮಧುಸೂದನ್​, ಮುಖಂಡರಾದ ೇತ್ರನಹಳ್ಳಿ ವೆಂಕಟೇಶ್​ ಗೌಡ, ಶ್ರೀನಿವಾಸ್​, ಎ. ರಾಜಪ್ಪ, ಬುಲೆಟ್​ ವೆಂಕಟೇಶ್​ ಇದ್ದರು.

ಇಂದಿರಾ ಕ್ಯಾಂಟೀನ್​ಗೆ ಚಾಲನೆ

ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್​ ಪ್ರಾರಂಭಿಸುವ ಕನಸು ಇಂದು ನನಸಾಗಿದೆ ಎಂದು ಕೆ.ವೈ.ನಂಜೇಗೌಡ ತಿಳಿಸಿದರು. ಪಟ್ಟಣದ ಬಸ್​ ನಿಲ್ದಾಣದ ಬಳಿ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭಾ ಕಾರ್ಯಾಲಯ ಸಹಯೋಗದೊಂದಿಗೆ ಇಂದಿರಾ ಕ್ಯಾಂಟೀನ್​ಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ತಾಲೂಕಿನ ಜನತೆಗೆ ಜಾತ್ಯತಿತ, ಪಾತೀತವಾಗಿ ಈ ದಿನ ಸಂತೋಷ ಪಡುವ ದಿನ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ತೆಗೆದುಕೊಂಡ ನಿರ್ಧಾರಗಳಲ್ಲಿ ಇಂದಿರಾ ಕ್ಯಾಂಟೀನ್​ ಪ್ರಮುಖವಾದದ್ದು. ಸಾಮಾನ್ಯ, ಮಧ್ಯಮವರ್ಗದವರು ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಿಗೆ ಬಂದಾಗ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಿಲ್ಲೆಯಲ್ಲಿಯೇ ಹವಾನಿಯಂತ್ರಿತ, ಹೈಟೆಕ್​ ಇಂದಿರಾ ಕ್ಯಾಂಟೀನ್​ಅನ್ನು ಮಾಲೂರಿನಲ್ಲಿ ಪ್ರಾರಂಭಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net