

ಸಿಂಧನೂರು: ಬೂದಿವಾಳ ವಿವಿಧೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ 2024-25 ಸಾಲಿನಲ್ಲಿ 22.19 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಸವರಾಜಗೌಡ ಹೇಳಿದರು.
ತಾಲೂಕಿನ ಬೂದಿವಾಳ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಂಘವು ಆಡಿಟ್‌ನಲ್ಲಿ ಸತತ ಎಂಟು ವರ್ಷಗಳಿಂದ ಉತ್ತಮ ಲಾಭಗಳಿಸಿದೆ. ಇದಕ್ಕೆ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ಶ್ರಮ ಕಾರಣ. ಕೃಷಿ ಸಹಕಾರಿಗಳು ರೈತರ ಜೀವನಾಡಿಯಾಗಿದ್ದು, ಅಲ್ಲದೇ ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಸಂಘದ ಸಿಇಒ ಶಿವಗ್ಯಾನಪ್ಪ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಕೆ.ರಾಮಯ್ಯ, ನಿರ್ದೇಶಕರಾದ ತಿಮ್ಮಾರಡ್ಡಿ, ಶ್ರೀನಿವಾಸ ಗಾರಪಾಟಿ, ಶರಣಪ್ಪ, ರಾಮಣ್ಣ ಬಾದರ್ಲಿ, ಹನುಮಂತ, ಮೌನೇಶ, ಲಿಂಗಾರಡ್ಡಿ ಪಾರ್ವತಿ, ಯರಿಯಮ್ಮ ಲಿಂಗಪ್ಪ, ಹಂಪಮ್ಮ ದ್ಯಾವಣ್ಣ, ಸಂಘದ ಕಾರ್ಯ ವ್ಯಾಪ್ತಿಯ ಗ್ರಾಮದ ಸಂಘದ ಸದಸ್ಯ ರೈತರು ಇದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕನ್ನಾರಿ, ಬೂದಿವಾಳ, ಬೂದಿವಾಳಕ್ಯಾಂಪ್, ಮಾಡಸಿರವಾರ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.