22 ಕೋಟಿ ರೂ. ಅನುದಾನಕ್ಕೆ ಮನವಿ

Abbayya
Published on

ಮುಂಡಗೋಡ: ಪಟ್ಟಣ ಹೊರವಲಯದ ಹೆಬ್ಬಾರ ನಗರದಲ್ಲಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ 2 ವಸತಿ ಸಮುಚ್ಚಯವನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹಾಗೂ ಶಾಸಕ ಶಿವರಾಮ ಹೆಬ್ಬಾರ ವೀಕ್ಷಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಹೆಬ್ಬಾರ ನಗರದಲ್ಲಿ 602ಮನೆಗಳು ಹಾಗೂ ಕಾರ್ಮಿಕರ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿವೆ.
ಕಲ್ಯಾಣ ಮಂಟಪ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ 2 ಮನೆಗಳಿಗೆ ವಿವಿಧ ಪರಿಕರಗಳ ಅಳವಡಿಕೆಗೆ 22 ಕೋಟಿ ರೂ. ಅನುದಾನದ ಅವಶ್ಯಕತೆಯಿದ್ದು, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜೂರು ಮಾಡುವಂತೆ ಶಾಸಕ ಹೆಬ್ಬಾರ ಅವರು ಪ್ರಸಾದ ಅಬ್ಬಯ್ಯ ಅವರಲ್ಲಿ ವಿನಂತಿಸಿದರು. ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಅಬ್ಬಯ್ಯ ಭರವಸೆ ನೀಡಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ನಾಗಭೂಷಣ ಹಾವಣಗಿ, ಕೃಷ್ಣ ಹಿರಳ್ಳಿ, ಮಂಜುನಾಥ ಪಾಟೀಲ, ಜ್ಞಾನದೇವ ಗುಡಿಯಾಳ, ಸಿದ್ದಪ್ಪ ಹಡಪದ, ಎಚ್.ಎಂ. ನಾಯ್ಕ, ಗುಡ್ಡಪ್ಪ ಕಾತೂರ, ಫಣಿರಾಜ ಹದಳಗಿ, ಕೆಂಜೋಡಿ ಗಲಬಿ, ಎಂ.ಕೆ. ರಜಾ, ಲಕ್ಷ್ಮಣ ಬನ್ಸೋಡೆ, ಬಾಬಣ್ಣ ಓಣಿಕೇರಿ, ಫಕೀರಸ್ವಾಮಿ ಗುಲ್ಯಾನವರ, ರಾಮು ಲಮಾಣಿ, ಅಶೋಕ ಚಲವಾದಿ, ರಪೀಕ್ ಇನಾಮದಾರ್, ಸಲಿಂ ನಂದಿಗಟ್ಟಿ,ಅಲ್ಲಿಖಾನ ಪಠಾಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net