ಮಾಲೂರು ಕ್ಷೇತ್ರ ಅಭಿವೃದ್ಧಿಗೆ 22 ಕೋಟಿ ಅನುದಾನ

13 Maluru 1
Published on

ಮಾಲೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಇರುವುದರಿಂದ ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಕೂಲವಾಯಿತು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಪುರಸಭೆಯ ರಂಗಮಂದಿರದಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರಸಭೆಯ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಮಾಲೂರಿನ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ವರ್ಜೆಗೇರಿಸಿರುವುದರಿಂದ ಪಟ್ಟಣದ ಅಭಿವೃದ್ಧಿಯೊಂದಿಗೆ ಸರ್ಕಾರದಿಂದ ಹೆಚ್ಚು ಅನುದಾನ ಸಿಗಲಿದೆ. ಪುರಸಭೆ ನಗರಸಭೆ ಆಗಿರುವುದರಿಂದ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಸಂಖ್ಯೆ ಏರಿಕೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ, ಯೋಜನೆ ಸೌಲಭ್ಯಗಳು ಸಿಗಲಿದೆ ಎಂದು ತಿಳಿಸಿದರು.

ನಗರಸಭೆಯ ಬಜೆಟ್​ ಗಾತ್ರವು ಹೆಚ್ಚಾಗುವುದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 22 ಕೋಟಿ ರೂ. ಹಣ ಮಂಜೂರಾಗಿದ್ದು, ಬಸ್​ ನಿಲ್ದಾಣ, ಕೆರೆ, ಉದ್ಯಾನವನ, ಸಮುದಾಯ ಭವನ ಸೇರಿ ಹಲವು ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿದೆ. ನೂತನವಾಗಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದ್ದು, ಸರ್ಕಾರ ಮೊದಲ ಹಂತದಲ್ಲಿ 45 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಯೋಜನಾ ಪ್ರಾಧಿಕಾರ ಅಧ್ಯ ಮಹ್ಮದ್​, ನಯೀಮ್​ಉಲ್ಲಾ, ಪುರಸಭೆ ಮುಖ್ಯಾಧಿಕಾರಿ ಪ್ರದಿಪ್​ ಕುಮಾರ್​, ಕೋಮುಲ್​ ನಿರ್ದೇಶಕ ಎಂ.ಎನ್​,ಶ್ರೀನಿವಾಸ್​, ರಾಜ್ಯ ಯುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಸುನೀಲ್​ ನಂಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net