

ತಿ.ನರಸೀಪುರ: ಬನ್ನೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ 22 ಕೋಟಿ ರೂ.ಗಳ ಅನುದಾನಕ್ಕೆ ಪುರಸಭೆಯಿಂದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಬನ್ನೂರು ಪುರಸಭೆ ಆವರಣದಲ್ಲಿ ಶನಿವಾರ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ, ಮನೆ ಮನೆ ಕಸ ಸಂಗ್ರಹಿಸುವ ಮಿನಿ ಟಿಪ್ಪರ್‌ಗಳಿಗೆ ಚಾಲನೆ, ಪರಿಶಿಷ್ಟ ವರ್ಗದ ಬಿಇ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಹಂತದಲ್ಲಿ 11 ಕೋಟಿ, ಎರಡನೆಯದು 10 ಕೋಟಿ ರೂ. ಹಾಗೂ 3ನೇ ಯೋಜನೆಗೆ 50 ಲಕ್ಷ ರೂ.ಗಳ ಅನುದಾನಕ್ಕೆ ಬನ್ನೂರು ಪುರಸಭೆಯಿಂದ ಪ್ರಸ್ತಾವನೆ ಸಲ್ಲಿಸಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಹಣವನ್ನ ಮಂಜೂರು ಮಾಡಲಾಗುವುದು. ಅಲ್ಲದೇ 100 ಕೋಟಿ ರೂ. ವೆಚ್ಚದ ತುರುಗನೂರು ಏತ ನೀರಾವರಿ ಯೋಜನೆಗೂ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಸುನೀಲ್ ಬೋಸ್, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಪುರಸಭೆ ಮುಖ್ಯಾಧಿಕಾರಿ ಆರ್. ಹೇಮಂತ್‌ರಾಜ್, ಮಾಜಿ ಅಧ್ಯಕ್ಷ ಮುನಾವರ್ ಪಾಷ, ಭಾಗ್ಯ ಕೃಷ್ಣ, ಮಾಜಿ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಸದಸ್ಯರಾದ ಲೋಕಂಬಿಕ, ಶಿವಣ್ಣ, ಮೈಮುಲ್ ನಿರ್ದೇಶಕ ಆರ್.ಚಲುವರಾಜು, ಪೀ ಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ. ವಜ್ರೇಗೌಡ, ಸಹಾಯಕ ಪ್ರಾಧ್ಯಾಪಕ ಡಾ. ಬಿ.ಕೆ. ಜ್ಞಾನಪ್ರಕಾಶ್, ವಕೀಲ ಶಿವಮೂರ್ತಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎನ್.ರವಿಕುಮಾರ್, ಲಕ್ಷ್ಮೀನಾರಾಯಣ್, ರಂಗಸಮುದ್ರ ರಮೇಶ, ಜಿ.ಪಂ ಮಾಜಿ ಸದಸ್ಯ ಮಂಜುನಾಥನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಹಿಂ.ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್, ಕಾರ್ಮಿಕ ಅಧ್ಯಕ್ಷ ಶಿವಸಿದ್ದು, ಗುತ್ತಿಗೆದಾರ ಉಮೇಶ್, ಮುಖಂಡರಾದ ಸತೀಶ್ ನಾಯಕ, ನಂಜಾಪುರ ಶಿವಣ್ಣ, ಸಿ.ಎಂ.ಶಶಿಭೂಷಣ್, ಪೀರ್ ಖಾನ್, ಸಯ್ಯದ್ ಯಾಹಿಯಾ, ಯಾಚೇನಹಳ್ಳಿ ರಾಘವೇಂದ್ರ, ನರಸಿಂಹ ಮಾದನಾಯಕ, ತುಂಬಲ ಪ್ರಕಾಶ್ ಹಾಗೂ ಇನ್ನಿತರರು ಹಾಜರಿದ್ದರು.