

ತರೀಕೆರೆ: ತಾಲೂಕಿನ ಹಾದಿಕೆರೆ ಅರಣ್ಯ ವ್ಯಾಪ್ತಿಯ ಎಚ್.ರಂಗಾಪುರ-ಎಚ್.ತಿಮ್ಮಾಪುರ ಸ.ನಂ.13 ಮತ್ತು 25ರಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಬೆಳೆಸಿದ್ದ 22 ಎಕರೆ ಅಡಕೆ ತೋಟವವನ್ನು ತರೀಕೆರೆ ಹಾಗೂ ಲಕ್ಕವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರಲ್ಲದೇ, ಆ ಜಾಗದಲ್ಲಿ ಪ್ರವೇಶ ನಿರ್ಬಂಧಿಸಿ ಬ್ಯಾನರ್ ಅಳವಡಿಸಿದರು.
1963ರ ಕರ್ನಾಟಕ ಅರಣ್ಯ ಕಾಯ್ದೆಯಡಿ ತರೀಕೆರೆ ಸಹಾಯಕ ಅರಣ್ಯ ಉಪಸಂರಕ್ಷಣಾಧಿಕಾರಿ ಎನ್.ಕೆ.ಉಮರ್ ಬಾದ್‌ಷಾ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಲಕ್ಕವಳ್ಳಿ ಹಾಗೂ ತರೀಕೆರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್.ತಿಮ್ಮಾಪುರ-ಎಚ್.ರಂಗಾಪುರ ಗ್ರಾಮದ ಸ.ನಂ.13 ಮತ್ತು 25ರಲ್ಲಿ ಅರಣ್ಯ ಜಾಗ ಅತಿಕ್ರಮಿಸಿ ಅಡಕೆ ಬೆಳೆದಿದ್ದಾರೆಂದು ಹೇಳಲಾಗುತ್ತಿರುವ 22 ಎಕರೆ ಅರಣ್ಯ ಜಾಗ ವಶಕ್ಕೆ ಪಡೆದು ತೋಟದ ಸುತ್ತ ಅಳವಡಿಸಿದ್ದ ತಂತಿ ಬೇಲಿ ತೆರವುಗೊಳಿಸಿದರು.
22 ಎಕರೆಯಷ್ಟು ಅಡಕೆ ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಸಲು ಕೊಯ್ಲಿಗೆ ಬಂದಿದ್ದು, ಮಾನವೀಯ ದೃಷ್ಟಿಯಿಂದ ಭದ್ರಾವತಿ ಅರಣ್ಯ ವಿಭಾಗದ ಡಿಸಿಎ್ ಡಾ. ಆಶೀಶ್ ರೆಡ್ಡಿ ಸಲು ಕೊಯ್ಲಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಎಸಿಎ್ ಎನ್.ಕೆ.ಉಮರ್ ಪಾಷ, ಆರ್‌ಎ್ಒಗಳಾದ ಕೆ.ಬಿ.ರಾಘವೇಂದ್ರ, ಆಸ್ೀ ಅಹಮದ್, ಡಿಆರ್‌ಎ್ಒಗಳಾದ ಪ್ರದೀಪ್, ಮನೋಜ್, ಶಂಕರನಾರಾಯಣ ಇತರರಿದ್ದರು.