21ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

18ydg01
Published on

ಯಾದಗಿರಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆ.21 ರಿಂದ ಸೆ.02ರ ವರೆಗೆ ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಸಿದ ಇಲಾಖೆ ಅಕಾರಿಗಳಿಗೆ ಜಿಲ್ಲಾಕಾರಿ ಡಾ.ಸುಶೀಲಾ ಬಿ., ನಿದರ್ೇಶನ ನೀಡಿದ್ದಾರೆ.

ಗುರುವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 6 ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದ್ದು, 91 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾಥರ್ಿಗಳನ್ನು ಜೋಡಿಸಲಾಗಿದೆ. ಒಟ್ಟು 2715 ವಿದ್ಯಾಥರ್ಿಗಳು ಹಾಜರಾಗಲಿದ್ದಾರೆ. ಅಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಯಾದಗಿರಿಯ ಸಕರ್ಾರಿ ಬಾಲಕರ ಪಿಯು ಕಾಲೇಜು, ಮಹಿಳಾ ಪಿಯು ಕಾಲೇಜು, ಶಹಾಪುರದ ಸಕರ್ಾರಿ ಪಿಯು ಕಾಲೇಜು, ಪಿಯು ಕಾಲೇಜು, ಸುರಪುರದ ಪ್ರಭು ಹಾಗೂ ಗುರುಮಠಕಲ್ ಪಟ್ಟಣದ ಸಕರ್ಾರಿ ಪಿಯು ಬಾಯ್ಸ್ ಕಾಲೇಜಿನಲ್ಲಿ ಪರೀಕ್ಷಾ ನಡೆಯಲಿದ್ದು, ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು. ಅಕಾರಿಗಳು ನಿಯಮಾವಳಿಗಳಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕೇಂದ್ರಗಳಲ್ಲಿಯ ಮಾಹಿತಿಗಳನ್ನು ಚಿತ್ರೀಕರಿಸುವುದು, ಸಮೂಹ ಮಾಧ್ಯಮಗಳಲ್ಲಿ, ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಒಂದು ವೇಳೆ ಕಂಡುಬಂದಲ್ಲಿ ಇಲಾಖಾ ಕ್ರಮದಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇತ ಪ್ರದೇಶ ಎಂದು ಘೋಷಿಸಲಾಗುವುದು. ಸೂಕ್ತ ಬಂದೋಬಸ್ತ್ಗಾಗಿ ಪೊಲೀಸರು ಸಮಯಕ್ಕಿಂತ ಮುಂಚಿತವಾಗಿಯೇ ತೆರಳಬೇಕು ಎಂದರು.

ಇನ್ನೂ ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್ಗಳ ನೇಮಕ ರದ್ದುಪಡಿಸಲಾಗಿದೆ. ಹೀಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಯಾ ಕೊಠಡಿಗಳ ಅಂತರದಲ್ಲಿ ಹೊರಗಡೆ ಮಾಡಬೇಕು. ವಿದ್ಯಾಥರ್ಿಗಳು ಮೊಬೈಲ್ ಪೋನ್ಗಳ ಬಳಕೆ ಮಾಡುವಂತಿಲ್ಲ. ಈ ಬಗ್ಗೆ ಮೇಲ್ವಿಚಾರಕರು ಮೊದಲೇ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಜಿಲ್ಲಾ ಖಜಾನೆ ಅಕಾರಿ ಮಾಳಿಂಗರಾಯ, ಪಿಎಸ್ಐ ದೇವಿಂದ್ರಪ್ಪ, ತಹಸಿಲ್ದಾರ ಸುರೇಶ ಅಂಕಲಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net