

ಬೆಳಗಾವಿ: ಮಾ.21ರಿಂದ ಏಪ್ರಿಲ್ 4ರವರೆಗೆ ಎಸ್ಎಸ್ಎಲ್ಸಿ ಪರೀೆಯನ್ನು ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ, ಸಿಬ್ಬಂದಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀೆ&1ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಪರೀಾ ಮಾರ್ಗಸೂಚಿ ಅನುಸರಿಸಬೇಕು. ಪ್ರತಿ ಪರೀಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಚಲನೆ ಕುರಿತು ನಿರಂತರ ನಿಗಾ ವಹಿಸಬೇಕು. ಜಿಪಂ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ತಾಲೂಕು ಹಂತದಲ್ಲಿ ವೆಬ್ ಕಾಸ್ಟಿಂಗ್ ತಂತ್ರರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸೂಕ್ಷ$್ಮ ಅತೀ ಸೂಕ್ಷ$್ಮ ಪರೀೆ ಕೇಂದ್ರಗಳನ್ನು ವಿಂಗಡಿಸಲಾಗಿದ್ದು, ಬೆಳಗಾವಿಯಲ್ಲಿ 5, ಚಿಕ್ಕೋಡಿಯಲ್ಲಿ 5 ಕೇಂದ್ರಗಳಿವೆ ಎಂದರು.
ಕೇಂದ್ರಗಳ ಸುತ್ತ ನಿಗಾ: ಸಿಸಿಟಿವಿ ಕಳ್ಳತನ, ವಾದ&ವಿವಾದ ಸೇರಿ ಕಳೆದ ವರ್ಷ ಸಣ್ಣ&ಪುಟ್ಟ ಗಲಾಟೆಯಾಗಿರುವ 25 ಪರೀಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸೂಕ್ಷ$್ಮ ಪರೀೆ ಕೇಂದ್ರಗಳ ನಿಯೋಜಿತ ಸಿಬ್ಬಂದಿ ನಿರಂತರ ಗಮನ ಹರಿಸಬೇಕು. ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ವೈದ್ಯಕಿಯ ಸೇವೆ ಅಗತ್ಯ: ಪರೀೆ ಕೇಂದ್ರಗಳಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪುವಂತೆ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಮುಂಚಿತವಾಗಿಯೇ ಬಸ್ ಸಂಚಾರ ಮಾರ್ಗ ಗುರುತಿಸಬೇಕು. ಆರೋಗ್ಯ ಇಲಾಖೆಯಿಂದ ತುರ್ತು ಸೇವೆ, ಅಗತ್ಯ ಔಷಧ ಇರಬೇಕು. ನುರಿತ ವೈದ್ಯಕಿಯ ಸಿಬ್ಬಂದಿ ನೇಮಿಸಬೇಕು ಎಂದು ಸೂಚಿಸಿದರು. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ನಿಗಾ ವಹಿಸಬೇಕು. ಪರೀಾ ಕೇಂದ್ರಗಳ ಪರಿವೀಕ್ಷಣೆಗೆ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ವಿಶೇಷ ತಂಡ ನಿಯೋಜಿಸಲಾಗಿದೆ ಎಂದರು.
ಮುಂಜಾಗ್ರತಾ ಕ್ರಮ:ಪರೀಕ್ಷೆ ಕೇಂದ್ರದ ಸುತ್ತ 200 ಮೀ. ನಿಷೇಧಿತ ಪ್ರದೇಶ ಎಂದು ೂಷಣೆ, ಝರಾಕ್ಸ್ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. 600ಕ್ಕಿಂತ ಹೆಚ್ಚು ಪರೀಾರ್ಥಿಗಳನ್ನು ಹೊಂದಿದ ಮತ್ತು ಆಯ್ದ 35 ಪರೀಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗುವುದು. ಪರೀೆಗಳ ಗೌಪ್ಯತೆ, ಪಾರದರ್ಶಕತೆ ಕಾಪಾಡಲು ಜಾಗೃತ ದಳದ ತಂಡ ರಚಿಸಲಾಗಿದೆ ಎಂದರು. ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಪರೀೆ ಸಂದರ್ಭದಲ್ಲಿ ಕೆಲವು ಊರುಗಳಲ್ಲಿ ಜಾತ್ರೆ, ಖಾಸಗಿ ಕಾರ್ಯಕ್ರಮ ಇರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪರೀಾ ಕೇಂದ್ರಗಳ ಸುತ್ತ ಯಾವುದೇ ಸ್ಪೀಕರ್, ಶಬ್ದಗಳು ಕೇಳಿ ಬರದಂತೆ ನೋಡಿಕೊಳ್ಳಬೇಕು ಎಂದರು. ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಡಿಪಿಐ ಲೀಲಾವತಿ ಹಿರೇಮಠ, ಚಿಕ್ಕೋಡಿ ಡಿಡಿಪಿಐ ಸೀತಾರಾಮು, ಸಹ ನಿರ್ದೇಶಕ ಸಕರೆಪ್ಪಗೌಡ ಬಿರಾದರ, ಡಯಟ್ ಪ್ರಾಚಾರ್ಯ ಬಸವರಾಜ ನಲತವಾಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ, ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.227 ಕೇಂದ್ರಗಳಲ್ಲಿ ಎಕ್ಸಾಂ ಬೆಳಗಾವಿ& 518, ಚಿಕ್ಕೋಡಿ& 601 ಸೇರಿ ಒಟ್ಟು 1,119 ಪ್ರೌಢಶಾಲೆಗಳಿದ್ದು, 227 ಪರೀಾ ಕೇಂದ್ರಗಳಿವೆ. ಬೆಳಗಾವಿ 34,863 ಹಾಗೂ ಚಿಕ್ಕೋಡಿ 46,539 ಸೇರಿ ಒಟ್ಟು 81,402 ವಿದ್ಯಾರ್ಥಿಗಳು ಪರೀೆ ಬರೆಯಲಿದ್ದಾರೆ.