21ರಂದು ರೈತ ಹುತಾತ್ಮ ದಿನ

web1
ಮುನವಳ್ಳಿ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅಂಬರೀಷ ಯಲಿಗಾರ ಮಾತನಾಡಿದರು. ಬಾಳಪ್ಪ ಮೇಟಿ, ಸಂಗಮೇಶ ಬಟಕುರ್ಕಿ ಇತರರಿದ್ದರು.
Published on

ಮುನವಳ್ಳಿ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ಜು. 21ರಂದು ರೈತರ ಹುತಾತ್ಮದಿನಾಚರಣೆ ಆಚರಿಸಲು ತೀರ್ಮಾನಿಸಿದೆ ಎಂದು ಮುಖಂಡ ಅಂಬರೀಷ ಯಲಿಗಾರ ಹೇಳಿದರು.

ಪಟ್ಟಣದಲ್ಲಿ ಕಳಸಾ-ಬಂಡೂರಿ ನಾಲಾ ಜೋಡಣೆ ಹೋರಾಟ ಸಮಿತಿ ಹಾಗೂ ರೈತರಿಂದ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ವಿಶೇಷವಾಗಿ ಮಲಪ್ರಭಾ ನದಿಗೆ ಕಳಸಾ-ಬಂಡೂರಿ ಜೋಡಣೆಯ ಅಗತ್ಯ ಕ್ರಮಗಳನ್ನು ಸರ್ಕಾರ ತ್ವರಿತವಾಗಿ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು.

ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ, ರೈತ ಹುತಾತ್ಮ ದಿನಾಚರಣೆ ನಿಮಿತ್ತ ಜು. 21ರಂದು ರೈತರಾದ ಶಂಕರಗೌಡ ಪಾಟೀಲ ಹಾಗೂ ಅನಸೂಯಾ ಹನಸಿ ಅವರಿಗೆ ‘ನೇಗಿಲ ಯೋಗಿ ಕಾಯಕಜೀವಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಬಾಳಪ್ಪ ಮೇಟಿ, ಸಂಗಮೇಶ ಬಟಕುರ್ಕಿ, ಸಂಜೀವಕುಮಾರ ತುಳಜಣ್ಣವರ, ರಾಮನಗೌಡ ಗೀದಿಗೌಡ್ರ, ಕಲ್ಲಪ್ಪ ನಲವಡೆ, ಈರಣ್ಣ ಬಸಲಿಗುಂದಿ, ಬಸವರಾಜ ಬಳಿಗಾರ, ಶಿವಪುತ್ರಪ್ಪ ಕೆಳಗಡೆ, ಪ್ರಕಾಶ ಕಾಮಣ್ಣವರ, ಮುತ್ತಣ್ಣ ಘಟವಾಳಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net