21ರಂದು ತೀರ್ಥಾಶ್ರಮದಲ್ಲಿ ರಥೋತ್ಸವ

SRI RAJAYOGISWAMY--00008
Published on

ಚಿತ್ರದುರ್ಗ:ನಗರದ ಮೆದೇಹಳ್ಳಿ ರಸ್ತೆ ಶ್ರೀ ಶಾಂತಾರಾಮ ತೀರ್ಥಾಶ್ರಮದಲ್ಲಿ ಶ್ರೀ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತ ಚೂ ಡಾಮಣಿ ಮಾತಾಜಿ ಅವರ ಪುಣ್ಯಾರಾಧನೆ ಮತ್ತು ರಥೋತ್ಸವ ಜೂ.21ರಂದು ಸಂಜೆ 4-30 ಕ್ಕೆ ನಡೆಯಲಿದೆ. 21ರಂದು ಬೆಳಗ್ಗೆ ಬ್ರಾಹ್ಮಿ ಮ ಹೂರ್ತದಲ್ಲಿ ಕಳಸ ಸ್ಥಾಪನೆ,ಗಣಪತಿ ಪೂಜೆ,ನವಗ್ರಹ ಪೂಜೆ,ಹೋಮ,ಗುರುಪೂಜೆ, ಪಂಚಾಮೃತಾಭಿಷೇಕ ನಂತರ ಮಹಾಮಂಗಳಾರತಿ ನೆರ ವೇರಲಿದೆ. ಮಹಾರಥೋತ್ಸವದಲ್ಲಿ ಭಕ್ತ ವೃಂದದವರಿಂದ ಭಜನೆ,ಕೀರ್ತನೆ ನಡೆಯಲಿದೆ. ಅನ್ನಸಂತರ್ಪಣೆಯಿರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯ ಲ್ಲಿ ಆಗಮಿಸುವಂತೆ ಶಾಂತಾರಾಮ ತೀರ್ಥಾಶ್ರಮ ಟ್ರಸ್ಟ್ ಸದಸ್ಯ ಗಿರೀಶ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net