

ಮೈಸೂರು: ಕಲಾವಿದ ಆರ್.ಪ್ರವೀಣ್ ಅವರ ಜಲವರ್ಣ ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಆ.21ರಂದು ಬೆಳಗ್ಗೆ 11ಕ್ಕೆ ವಿಜಯನಗರ 2ನೇ ಹಂತದಲ್ಲಿರುವ ನೆರಳು-ಬೆಳಕು ಕಾಫಿ ಸಿಟಿ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.
ನಗರ ಪೊಲೀಸ್ ಉಪ ಆಯುಕ್ತ ಎಂ.ಮುತ್ತುರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಅಬ್ದುಲ್ ರಶೀದ್, ಸಿನಿಮಾ ನಟ ರಿತ್ವಿಕ್ ಮಠದ್ ಪಾಲ್ಗೊಳ್ಳಲಿದ್ದಾರೆ ಎಂದು ಕಲಾವಿದ ಆರ್.ಪ್ರವೀಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂಬೈನ ಪ್ರತಿಷ್ಠಿತ ಜಹಂಗೀರ್ ಕಲಾ ಗ್ಯಾಲರಿ ಸೇರಿದಂತೆ ಹಲವು ಕಡೆ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ನನ್ನ ವನ್ಯಜೀವಿಗಳ ಜಲವರ್ಣ ಚಿತ್ರಗಳು ಜನಪ್ರಿಯವಾಗಿವೆ. ನನ್ನ ಕಾಡಿನ ಅನುಭವ ಕುಂಚದಲ್ಲಿ ಅರಳಿದೆ ಎಂದು ಮಾಹಿತಿ ನೀಡಿದರು.