ಜೀವನದಲ್ಲಿ ಬಸವ ತತ್ವ ಅಳವಡಿಸಿಕೊಳ್ಳಿ

10hbd3
ಹುಮನಾಬಾದ್‌ನ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವೇಶ್ವರ ಪುತ್ಥಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಆರ್ಯ, ಮಲ್ಲಿಕಾರ್ಜುನ ಸೀಗಿ, ಗಜೇಂದ್ರ ಕನಕಟಕರ, ಸಂತೋಷ ಪಾಟೀಲ್, ಸುನೀಲ ಪಾಟೀಲ್ ಇತರರಿದ್ದರು.
Published on

ಹುಮನಾಬಾದ್: ಸುಂದರ ಬದುಕಿಗಾಗಿ ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕೇಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಬಸವ ಜಯಂತಿ ನಿಮಿತ್ತ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ಜಾತಿ ಧರ್ಮ, ಮೂಢನಂಬಿಕೆ, ಕಂದಾಚಾರದ ವಿರುದ್ದ ಸಮರ ಸಾರುವ ಮೂಲಕ ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ್ದಾರೆ ಎಂದು ಹೇಳಿದ ಅವರು, ಸರ್ವರಿಗೂ ಜಗಜ್ಯೋತಿ ಬಸವೇಶ್ವರ ಜಯಂತಿಯ ಶುಭಾಶಯ ಕೋರಿದರು.

ಬಸವರಾಜ ಆರ್ಯ, ರವಿ ಮಾಡಗಿ, ಜಗನಾಥ ಭಾವಿ, ವೀರಪಣ್ಣಾ ಕಲಬುರಗಿ, ಬಾಬುರಾವ ಪೊಚಂಪಳ್ಳಿ, ರವಿ ಪರಮಶೆಟ್ಟಿ, ಸುಜಿತ ಮಾಡಗಿ, ಗುರುಲಿಂಗ ಭಾವಿ, ಸೂರ್ಯಕಾಂತ ಹಾರಕೂಡ, ಸಂತೋಷ ಪಾಟೀಲ್, ಸುನೀಲ ಪಾಟೀಲ್, ಡಾ.ಭದ್ರೇಶ ಪಾಟೀಲ್, ಸಂಗಮೇಶ ಪಾಟೀಲ್, ವಿನಾಯಕ ಪಾಟೀಲ್, ಪ್ರಭಾಕರ ನಾಗರಾಳೆ, ಗಜೇಂದ್ರ ಕನಕಟಕರ, ಅನಿಲ ಪಸಾರ್ಗಿ, ಸಂತೋಷ ನಾವದಗಿ, ಮಲ್ಲಿಕಾರ್ಜುನ ಸೀಗಿ, ಸುನೀಲ ಪತ್ರಿ, ರಾಜರೆಡ್ಡಿ ಹಾಗೂ ಬಸವ ಉತ್ಸವ ಸಮಿತಿಯ ಸದಸ್ಯರು ಇತರರಿದ್ದರು.


ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ: ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಆಯೋಜಿಸಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಪಾಲ್ಗೊಂಡು ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು. ಪ್ರಮುಖರಾದ ಬ್ಯಾಂಕ ರೆಡ್ಡಿ, ವೆಂಕಟ ರೆಡ್ಡಿ, ರಾಮರೆಡ್ಡಿ, ಶಿವು ರೆಡ್ಡಿ, ಅಂಜು ರೆಡ್ಡಿ, ರಾಘು ರೆಡ್ಡಿ, ರಾಜರೆಡ್ಡಿ, ಸಂತೋಷ ಪಾಟೀಲ್, ಸುನೀಲ ಪಾಟೀಲ್, ಡಾ.ಭದ್ರೇಶ ಪಾಟೀಲ್, ಸಂಗಮೇಶ ಪಾಟೀಲ್, ವಿನಾಯಕ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಸುನೀಲ ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net