ಮೋದಿಗಾಗಿ 21 ಸಾವಿರ ಕಿ.ಮೀ. ಬೈಕ್ ಜಾಥಾ

28Kush04
ಮೋದಿಗಾಗಿ 21 ಸಾವಿರ ಕಿಮೀ ಬೈಕ್ ಜಾಥಾ ನಡೆಸುತ್ತಿರುವ ತಮಿಳುನಾಡಿನ ರಾಜಲಕ್ಷ್ಮೀ ಅವರನ್ನು ಕುಶಾಲನಗರದ ಕೊಪ್ಪ ಗೇಟ್ ಬಳಿ ಮಾಜಿ ಸಭಾಪತಿ ಕೆ.ಜಿ.ಬೊಪ್ಪಯ್ಯ, ಪುಂಡರಿಕಾಕ್ಷ, ನಾರಾಯಣ, ನಾಗರಾಜ್ ಇತರರು ಸ್ವಾಗತಿಸಿದರು
Published on

ಕುಶಾಲನಗರ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ದೇಶಾದ್ಯಂತ ತಿಳಿಸಿ ಜನರಲ್ಲಿ ಅರಿವು ಮೂಡಿಸಲು ತಮಿಳುನಾಡು ಮೂಲದ ರಾಜಲಕ್ಷ್ಮೀ ಮಂದ ಕೈಗೊಂಡಿರುವ ಬೈಕ್ ಯಾತ್ರೆ ಕುಶಾಲನಗರದ ಕೊಪ್ಪ ಪ್ರವೇಶಿಸಿತು.

ಮಾಜಿ ಸಭಾಪತಿ ಕೆ.ಜಿ.ಬೊಪ್ಪಯ್ಯ ಹುಗುಚ್ಛ ನೀಡುವ ಮೂಲಕ ರಾಜಲಕ್ಷ್ಮಿ ಮತ್ತು ಅವರ ತಂಡವನ್ನು ಬರಮಾಡಿಕೊಂಡರು. ಬಳಿಕ ಮಾತನಾಡಿದ ರಾಜಲಕ್ಷ್ಮೀ ಮಂದ, ಕಳೆದ ಫೆ.12 ರಂದು ಮಧುರೈನಿಂದ ಹೊರಟು ದೇಶದ 15 ರಾಜ್ಯವನ್ನು ಸುತ್ತಿ ದೆಹಲಿ ತಲುಪಲಿದ್ದೇನೆ. ಒಟ್ಟು 21 ಸಾವಿರ ಕಿ.ಮೀ. ಬೈಕ್ ಜಾಥಾ ನಡೆಸಿ ಮುಂದಿನ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ಜಿ.ಎಲ್.ನಾಗರಾಜ್, ಎಂ.ವಿ.ನಾರಾಯಣ, ಕೊಡಗು ಜಿಪಂ ಮಾಜಿ ಸದಸ್ಯೆ ಕೆ.ಆರ್.ಮಂಜುಳಾ, ಕೂಡುಮಂಗಳೂರು ಗ್ರಾಪಂ ಮಾಜಿ ಅಧ್ಯಕ್ಷೆ ಇಂದಿರಾ ರಮೇಶ್, ಎಂ.ಡಿ.ಕೃಷ್ಣಪ್ಪ, ಬಿ.ಬಿ.ಭಾರತೀಶ್ ಇತರರು ಹಾಜರಿದ್ದರು. .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net