ಕರಾಟೆ ಪರೀಕ್ಷೆಯಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣ

9.npk-8
ಭಾಗಮಂಡಲ ಕೊರಂಗಾಲ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಶಾಲಿನ್ ಕುಂಫು ವತಿಯಿಂದ ಏರ್ಪಡಿಸಲಾಗಿದ್ದ ಕರಾಟೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು.
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಭಾಗಮಂಡಲ ಕೊರಂಗಾಲ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಶಾಲಿನ್ ಕುಂಫು ವತಿಯಿಂದ ಏರ್ಪಡಿಸಲಾಗಿದ ಕರಾಟೆ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಿರ್ಣರಾಗಿ ವಿವಿಧ ಬೆಲ್ಟ್’ಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷಾ ಪರಿವೀಕ್ಷಕರಾಗಿ ಮುಖ್ಯ ತರಬೇತುದಾರರಾದ ಇಂದ್ರಜಿತ್, ದೇವರಾಜ, ಶಾಲಾ ತರಬೇತುದಾರ ನಾಟೋಳಂಡ ನಂಜುಂಡ ಕರ್ತವ್ಯ ನಿರ್ವಹಿಸಿದರು.

ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕ ಚೀಯಕಪೂವಂಡ ಶ್ವೇತನ್ ಚಂಗಪ್ಪ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net