21 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟ

Grama panchayiti
Published on

ಸವಣೂರ: ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಬುಧವಾರ ತಾಲೂಕಿನ 21 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿಪಡಿಸಲಾಗಿದೆ.

ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಅನಿಲಕುಮಾರ ಜಿ., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಹಾಗೂ ಚುನಾವಣಾ ವಿಭಾಗದ ಅಧಿಕಾರಿಗಳ ತಂಡದ ಸದಸ್ಯರು ಕಾರ್ಯ ನಿರ್ವಹಿಸಿದರು.

ತಾಲೂಕಿನ ಕಾರಡಗಿ ಗ್ರಾಪಂ ಸೇರಿದಂತೆ ವಿವಿಧ ಗ್ರಾಪಂ ಸದಸ್ಯರು ನಿರೀಕ್ಷಿತ ಮೀಸಲಾತಿ ದೊರೆತಿಲ್ಲ ಎಂದು ಆಕ್ಷೇಪಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಮುಂದಾದರು. ತಕ್ಷಣ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಮೀಸಲಾತಿ ಘೋಷಣೆ ಕುರಿತು ವಿವರವಾದ ಮಾಹಿತಿ ಪಡೆಯಲು ಸಂಬಂಧಪಟ್ಟ ಗ್ರಾಪಂ ಸದಸ್ಯರು ಮನವಿ ಸಲ್ಲಿಸಿ, ಲಿಖಿತವಾಗಿ ವಿವರಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ತಾಲೂಕಿನ ತೆಗ್ಗಿಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾತಿ ಘೋಷಣೆಯಾಗಿದ್ದು, ರಾಧವ್ವ ಫಕೀರಪ್ಪ ಹರಿಜನ ಅಧ್ಯಕ್ಷೆಯಾಗುವುದು ಖಚಿತವಾಗಿದೆ. ಮೀಸಲಾತಿಗೆ ಸಂಬಂಧಿಸಿ ಏಕೈಕ ಸದಸ್ಯೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ
ಕಾರಡಗಿ- ಹಿಂ. ವರ್ಗ ಅ -ಮಹಿಳೆ ಎಸ್‌ಸಿ
ಚಿಲ್ಲೂರಬಡ್ನಿ - ಎಸ್‌ಸಿ ಮಹಿಳೆ- ಹಿಂ. ವರ್ಗ ಬ
ಮಂತ್ರೋಡಿ - ಸಾಮಾನ್ಯ -ಹಿಂ. ವರ್ಗ ಅ
ತವರಮೆಳ್ಳಿಹಳ್ಳಿ - ಸಾಮಾನ್ಯ ಮಹಿಳೆ- ಸಾಮಾನ್ಯ
ಕುರುಬರಮಲ್ಲೂರ - ಹಿಂ. ವರ್ಗ ಬ -ಸಾಮಾನ್ಯ ಮಹಿಳೆ
ತೆಗ್ಗಿಹಳ್ಳಿ - ಎಸ್‌ಸಿ ಮಹಿಳೆ,- ಸಾಮಾನ್ಯ
ಕುಣಿಮೆಳ್ಳಿಹಳ್ಳಿ - ಸಾಮಾನ್ಯ -ಎಸ್‌ಸಿ ಮಹಿಳೆ
ಹುರಳಿಕುಪ್ಪಿ - ಸಾಮಾನ್ಯ ಮಹಿಳೆ -ಸಾಮಾನ್ಯ
ತೊಂಡೂರ - ಹಿಂ. ವರ್ಗ ಅ ಮಹಿಳೆ -ಎಸ್‌ಟಿ
ಕಳಸೂರ - ಎಸ್‌ಸಿ -ಸಾಮಾನ್ಯ ಮಹಿಳೆ
ಹಿರೇಮುಗದೂರ - ಎಸ್‌ಸಿ -ಹಿಂ.ವರ್ಗ ಅ ಮಹಿಳೆ
ಹಿರೇಮರಳಿಹಳ್ಳಿ - ಸಾಮಾನ್ಯ ಮಹಿಳೆ -ಎಸ್‌ಸಿ
ಜಲ್ಲಾಪೂರ - ಸಾಮಾನ್ಯ -ಹಿಂ.ವರ್ಗ ಅ ಮಹಿಳೆ
ಶಿರಬಡಗಿ - ಸಾಮಾನ್ಯ- ಸಾಮಾನ್ಯ ಮಹಿಳೆ
ಯಲವಿಗಿ - ಎಸ್‌ಟಿ -ಸಾಮಾನ್ಯ ಮಹಿಳೆ
ಹೂವಿನಶಿಗ್ಲಿ - ಸಾಮಾನ್ಯ -ಸಾಮಾನ್ಯ ಮಹಿಳೆ
ಹೆಸರೂರ - ಸಾಮಾನ್ಯ ಮಹಿಳೆ -ಸಾಮಾನ್ಯ
ಇಚ್ಚಂಗಿ - ಹಿಂ. ವರ್ಗ ಅ -ಸಾಮಾನ್ಯ ಮಹಿಳೆ
ಕಡಕೋಳ - ಸಾಮಾನ್ಯ ಮಹಿಳೆ -ಎಸ್‌ಟಿ ಮಹಿಳೆ
ಹತ್ತಿಮತ್ತೂರ - ಸಾಮಾನ್ಯ ಮಹಿಳೆ -ಎಸ್‌ಸಿ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net