ಮಂಡ್ಯ ನಗರದಲ್ಲಿ 21 ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ದರ್ಶನ: ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಜಿಲ್ಲಾ ಮುಖ್ಯಸ್ಥೆ ಶಾರದಾ ಮಾಹಿತಿ

21 feet tall Rudrakshi Shivalinga Darshan mandya
Published on

ಮಂಡ್ಯ: ಶಿವ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 21 ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಪುಣ್ಯದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮಾ.7ರಿಂದ 12ರವರೆಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರದರ್ಶನವಿರಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಮುಖ್ಯಸ್ಥೆ ಬಿ.ಕೆ.ಶಾರದಾ ಹೇಳಿದರು.

ಹೋಲೋಗ್ರಾಂ ಶಿವಲಿಂಗ ಮತ್ತು ಸಹಸ್ರ ಶಿವಲಿಂಗದ ದರ್ಶನವನ್ನು ಬೆಳಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ ಪಡೆಯಲು ಅವಕಾಶವಿದೆ. ಪ್ರವೇಶ ಉಚಿತವಾಗಿದ್ದು, ಎಲ್ಲರೂ ಬರಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

7ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪವಲಯದ ನಿರ್ದೇಶಕಿ ಬಿ.ಕೆ.ಲಕ್ಷ್ಮೀಜೀ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಸಿಎಂ ಆಪ್ತ ಸಹಾಯಕ ತ್ರಿಭುವನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವ ಸಹಾಯ ಸಂಘದ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಪಾಲ್ಗೊಳ್ಳಿದ್ದಾರೆಂದು ವಿವರಿಸಿದರು.

ಸಹಾಯಕಿ ಬಿ.ಕೆ.ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net