ಇನ್ಸ್ಟಾಗ್ರಾಂನಲ್ಲಿ ಮಹಿಳೆಗೆ 21.70 ಲಕ್ಷ ರೂ. ವಂಚನೆ

Published on

ಮೈಸೂರು: ಇನ್ಸ್ಟಾಗ್ರಾಂನಲ್ಲಿ ಬಂದ ಷೇರು ಮಾರುಕಟ್ಟೆ ಜಾಹೀರಾತಿನಲ್ಲಿ ಹಣ ತೊಡಗಿಸಿದ ನಗರದ ಮಹಿಳೆ ಒಟ್ಟು 21.70 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನಗರದ ರಾಜರಾಜೇಶ್ವರಿನಗರ ನಿವಾಸಿ ಪಾರ್ವತಿ ಹಣ ಕಳೆದುಕೊಂಡವರು. ಷೇರು ಮಾರುಕಟ್ಟೆಯ ಕುರಿತು ಇನ್ಸ್ಟಾಗ್ರಾಂನಲ್ಲಿ ಲಿಂಕ್ ಗಮನಿಸಿ ಅಲ್ಲಿರುವ ನಂಬರ್‌ಗೆ ಕರೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ಮಾತನಾಡಿ, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿ ಹಂತ, ಹಂತವಾಗಿ ಒಟ್ಟು 21,70 ಲಕ್ಷ ರೂ. ಪಾವತಿಸಿದ್ದಾರೆ. ಆದರೆ ಹಣ ವಾಪಸ್ ಬಾರದೆ ವಂಚನೆಯಾಗಿದೆ ಎಂದು ಅರಿವಾದ ಬಳಿಕ ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net