

ಸೋಮವಾರಪೇಟೆ : ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಚೌಡ್ಲು ಸಹಕಾರ ಭವನದಲ್ಲಿ ಅಧ್ಯಕ್ಷ ಕೆ.ಟಿ. ಪರಮೇಶ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಅಧ್ಯಕ್ಷ ಪರಮೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು 21.34 ಲಕ್ಷ ರೂ. ಲಾಭಗಳಿಸಿದೆ. ಸಂಘದಲ್ಲಿ 2685 ಸದಸ್ಯರಿದ್ದು, 2023-24ನೇ ಸಾಲಿನಲ್ಲಿ 1310 ಸದಸ್ಯರಿಗೆ 19.44 ಲಕ್ಷ ರೂ. ಕೆಸಿಸಿ ಸಾಲ ನೀಡಲಾಗಿದೆ. ಸಂಘದಲ್ಲಿ 2350 ಮಂದಿ ಸದಸ್ಯರು ಮರಣ ನಿಧಿ ಪಾವತಿಸಿದ್ದು, ಉಳಿದ ಸದಸ್ಯರು ಸಹ ಕಡ್ಡಾಯವಾಗಿ ಮರಣ ನಿಧಿ ಪಾವತಿಸಬೇಕು. ಇದು ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ. ಸಹಕಾರ ಸಂಘಗಳು ಇದೀಗ ಗಣಕೀಕರಣಗೊಂಡಿದ್ದು, ಸರ್ಕಾರದ ಸಹಕಾರಿ ನಿಯಮದಂತೆ ಎಲ್ಲರೂ ಕೃಷಿ ಇಲಾಖೆಯಲ್ಲಿ ಎಫ್.ಐ.ಡಿ. ಮಾಡಿಸಿ, ನಂತರ ಸಾಲ ಪಡೆಯಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ವೈ.ಎಂ. ನಾಗರಾಜು, ನಿರ್ದೇಶಕರಾದ ಜಾನಕಿ ವೆಂಕಟೇಶ್, ಎಸ್.ಬಿ. ಈರಪ್ಪ, ಕವಿತಾವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು ದಳವಾಯಿ, ಕೆ.ಎಸ್.ವಿಜಯ, ಎಚ್.ಎಲ್. ವಿಜೇಂದ್ರ, ಎ.ಜೆ. ಕೃಷ್ಣಪ್ಪ, ಪಿ.ಎಸ್. ರವಿಕುಮಾರ್, ವಿ. ಹರೀಶ್, ಪದ್ಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಉಪಸ್ಥಿತರಿದ್ದರು.
ಸೋಮವಾರಪೇಟೆ ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿದರು. ನಾಗರಾಜು, ಜಾನಕಿ, ಈರಪ್ಪ, ಕವಿತಾ ಇದ್ದರು.