ಚಿತ್ರದುರ್ಗ:ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಈ ಬಾರಿಯ ಶರಣಸಂಸ್ಕೃತಿ ಉತ್ಸವದ ಸಿದ್ಧತೆಗಳ ಕುರಿತಂತೆ ಚರ್ಚಿಸಲು ಸೆ.20ರಂದು ಸಂಜೆ 5ಕ್ಕೆ ಶ್ರೀ ಮಠದಲ್ಲಿ ಸಭೆ ಕರೆಯಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವಂತೆ ಶ್ರೀಮಠದ ಪ್ರಕಟಣೆ ಕೋರಿದೆ.