20ರಂದು ನಾಳೆ ಬಸ್‌ಕಂಡಕ್ಟರ್ ನಾಟಕ ಪ್ರದರ್ಶನ

67be414e-5795-401d-9db8-f214be190e11--04
Published on

ಚಿತ್ರದುರ್ಗ: ನಗರದ ಶ್ರೀ ಸಾಹಿತ್ಯ ಸಾಮ್ರಾಜ್ಯನಾಟ್ಯ ಸಂಘ ನ.20ರಂದು ಸಂಜೆ 5ಕ್ಕೆ ತರಾಸು ರಂಗಮಂದಿರದಲ್ಲಿ ಬಸ್‌ಕಂಡಕ್ಟರ್ ನಾಟಕ ಪ್ರದರ್ಶನ ಏರ್ಪಡಿಸಿದೆ ಎಂದು ರಂಗಭೂಮಿ ಕಲಾವಿದ ಟಿ.ನಾಗೇಂದ್ರ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದ ರಂಗಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕವನ್ನು ವೀಕ್ಷಿಸಬೇಕೆಂದರು.
ಈ ನಾಟಕದ ಕಂಡಕ್ಟರ್‌ರಾಜು ಪಾತ್ರದಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಚಿತ್ರದುರ್ಗದ ಬಿ.ಕುಮಾರಸ್ವಾಮಿ ಅವರು ಕಾಣಿಸಲಿದ್ದಾರೆ. ಕಾರ‌್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಗಣ್ಯರನ್ನು ಗೌರವಿಸಲಾಗುವುದು ಎಂದರು.
ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಮೊಬೈಲ್ ಹಾವಳಿಯಿಂದಾಗಿ ರಂಗ ಕಲೆ ಇಂದು ನಶಿಸುತ್ತಿದೆ. ಮನರಂಜನೆಯೊಂದಿಗೆ ಸಾಮಾಜಿಕ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿರುವ ರಂಗಭೂಮಿ ಇಂದು ಅಪಾಯದಲ್ಲಿದೆ. ಇದರಿಂದಾಗಿ ವೃತ್ತಿ ಪರ ಕಲಾ ವಿದರು ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು. ನಾಟ್ಯ ಸಂಘದ ಅಧ್ಯಕ್ಷೆ ಸಿ.ಕೆ.ನಳಿನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net