20ರಂದು ಡಿ.ದೇವರಾಜ ಅರಸು ಜಯಂತಿ ಆಚರಣೆ

nrp nuur
ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ. ನೂರಲ್ ಹುದಾ ಅಧ್ಯಕ್ಷತೆಯಲ್ಲಿ ಡಾ. ದೇವರಾಜು ಅರಸು ಜಯಂತಿ ಪೂರ್ವಭಾವಿ ಸಭೆ ನಡೆಯಿತು. ಜುಬೇದಾ, ಗುರುದತ್ ಕಾಮತ್, ಆರ್.ವಿ.ಮಂಜುನಾಥ್, ಧರ್ಮರಾಜ್, ಬಿ.ಎಸ್.ನಿರಂಜನ್ ಗೌಡ, ಎಚ್.ಮಂಜುನಾಥ್, ಎ.ಸಿ.ಶ್ರೀನಿವಾಸ್ ಇತರರಿದ್ದರು.
Published on

ಎನ್.ಆರ್.ಪುರ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಹಸೀಲ್ದಾರ್ ಡಾ. ನೂರಲ್ ಹುದಾ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಗಳಲ್ಲಿ ಎಲ್ಲ ಅಧಿಕಾರಿಗಳೂ ಭಾಗವಹಿಸಬೇಕು. ಭಾಗವಹಿಸದಿದ್ದರೆ ನೋಟೀಸ್ ನೀಡಲಾಗುವುದು ಎಂದರು. ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ದೇವರಾಜು ಅರಸು ಸಾಮಾಜಿಕ ಹರಿಕಾರರಾಗಿದ್ದರು ಎಂದರು.

ಆ.20ರಂದು ದೇವರಾಜು ಅರಸು ಭವನದಲ್ಲಿ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು. ದೇವರಾಜು ಅರಸು ಕುರಿತು ಮಾತನಾಡಲು ಉಪನ್ಯಾಸಕರೊಬ್ಬರನ್ನು ಆಹ್ವಾನಿಸುವುದು ಹಾಗೂ ಹಿಂದುಳಿದ ವಸತಿ ನಿಲಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಪುರಸ್ಕರಿಸಲು ತೀರ್ಮಾನಿಸಲಾಯಿತು.

ಸಿಪಿಐ ಗುರುದತ್‌ಕಾಮತ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಧರ್ಮರಾಜ್, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಿಎಸ್‌ಐ ನಿರಂಜನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ದೇವರಾಜ್, ಪಿಕಪ್ ಚಂದ್ರು, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ವರುಣ್ ಸಿ. ಶೆಟ್ಟಿ, ಪ್ರಾಚಾರ್ಯ ಡಾ. ಧನಂಜಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net