20ಕ್ಕೂ ಹೆಚ್ಚು ವಾಹನಗಳಿಂದ ಬ್ಯಾಟರಿ ಕಳವು

7blrp4
ಬೇಲೂರಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂಭಾಗದಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ, ಕೇಬಲ್ ಮತ್ತು ಡೀಸೆಲ್ ಕಳವು ಮಾಡಿರುವುದು.
Published on

ಬೇಲೂರು: ಪಟ್ಟಣದಲ್ಲಿ ನಿಲ್ಲಿಸಿದ್ದ ಲಾರಿ ಹಾಗೂ ವಿವಿಧ ವಾಹನಗಳಿಂದ ಬುಧವಾರ ಬೆಳಗಿನ ಜಾವ 20ಕ್ಕೂ ಹೆಚ್ಚು ಬ್ಯಾಟರಿ, ಕೇಬಲ್ ಹಾಗೂ ಡೀಸೆಲ್ ಕಳವು ಮಾಡಲಾಗಿದೆ.


ಬೆಳಗಿನ ಜಾವ 2 ಗಂಟೆಯಲ್ಲಿ ಟಾಟಾ ಸುಮೋದಲ್ಲಿ ಬಂದಿರುವ ಕಳ್ಳರು, ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂಭಾಗದಲ್ಲಿ ನಿಲ್ಲಿಸಿದ್ದ 5ಕ್ಕೂ ಹೆಚ್ಚು ಲಾರಿ ಹಾಗೂ ಮೂಡಿಗೆರೆ ರಸ್ತೆಯ ಜೆಪಿ ನಗರ ಸೇರಿದಂತೆ ಇತರೆಡೆಯಲ್ಲಿಯೂ ನಿಲ್ಲಿಸಿದ್ದ 15 ವಾಹನಗಳಿಂದಲೂ ಬ್ಯಾಟರಿ, ಅದಕ್ಕೆ ಅಳವಡಿಸಿದ್ದ ಕೇಬಲ್ ಮತ್ತು ಡೀಸೆಲ್‌ಅನ್ನು ಕಳವು ಮಾಡಿ ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ.


ಮುಖ್ಯರಸ್ತೆ ಮೂಲಕವೇ ತೆರಳಿರುವ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ ಮಾಲೀಕರ ದೂರಿನ ಹಿನ್ನೆಲೆಯಲ್ಲಿ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net