ಸಕ್ಕರೆ ವಿತರಣೆಗೆ 20 ಕೊನೆಯ ದಿನ

Sugar
Published on

ಬೆಳಗಾವಿ: ಹುದಲಿಯ ಬೆಳಗಾಂ ಸಕ್ಕರೆ ಕಾರ್ಖಾನೆಗೆ 2024&25ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತ ಬಾಂಧವರಿಗೆ ಪ್ರತಿ ಟನ್​ ಕಬ್ಬಿಗೆ 500 ಗ್ರಾಂ.(ಅರ್ಧಕೆ.ಜಿ) ಸಕ್ಕರೆಯನ್ನು ಪ್ರತಿ ಕೆಜಿಗೆ 20ರೂ. ರಿಯಾಯಿತಿಯಲ್ಲಿ ನೀಡಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದಂತೆ, ಈಗಾಗಲೇ ವಿತರಣೆ ಆರಂಭಗೊಂಡಿದೆ.

ಈ ಸಕ್ಕರೆ ವಿತರಣೆಗೆ ಆ.20 ಸಕ್ಕರೆ ಕೊನೆಯ ದಿನವಾಗಿದೆ. 2024&25ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರು ಸಕ್ಕರೆ ಪಡೆಯದಿದ್ದಲ್ಲಿ ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಂಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರ ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರುಪಡಿಸಿ ಸಕ್ಕರೆ ಪಡೆದುಕೊಳ್ಳಬಹುದು ಎಂದು ಕಾರ್ಖಾನೆಯ ಹಿರಿಯ ಉಪಾಧ್ಯ ಎಲ್​.ಆರ್​.ಕಾರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net