

ಚಿಕ್ಕಮಗಳೂರು: ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ 20ನೇ ವಾರ್ಷಿಕೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆ ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ ಸಂಘದ ನಿರ್ದೇಶಕರಾದ ಗಿರಿಜಾ ಚಂದ್ರಪ್ಪ ಮತ್ತು ಕೋಮಲಾ ರವಿಕುಮಾರ್ ದಂಪತಿಗಳು ಗಣಪತಿ ಹೋಮ, ಸುದರ್ಶನ ಹೋಮವನ್ನು ಲೋಕ ಕಲ್ಯಾಣಕ್ಕಾಗಿ ನೆರೆವೇರಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಲಕ್ಷ್ಮೀವೆಂಕಟೇಶ್ವರ ದೇವಸ್ಥಾನವನ್ನು ಉದ್ಘಾಟಿಸಿ ಇಂದಿಗೆ 20 ವರ್ಷ ಪೂರ್ಣಗೊಂಡಿದೆ. ಅದರ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದ ಹೋಮ-ಹವನ, ವಿಶೇಷ ಪೂಜೆಗಳನ್ನು ನೆರೆವೇರಿಸಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷ ಎನ್.ಲಕ್ಷ್ಮಣಗೌಡ, ನಿರ್ದೇಶಕರಾದ ಕೆ.ಕೆ.ಮನುಕುಮಾರ್, ರವಿಕುಮಾರ್, ಕೆ.ಕೆ.ವೆಂಕಟೇಶ್, ಮೋಹನ್‌ಕುಮಾರ್, ಮಧು, ಮಹಿಳಾ ಸಂಘದ ನಿರ್ದೇಶಕಿ ಕೋಮಲಾ ರವಿಕುಮಾರ್, ವ್ಯವಸ್ಥಾಪಕ ರಾಜು ಇದ್ದರು.