ಶ್ರೀ ರಾಮಕೃಷ್ಣ ಮಂದಿರದ 20ನೇ ವಾರ್ಷಿಕೋತ್ಸವ; ಯುವ- ಶಿಕ್ಷಕರ ಸಮಾವೇಶ

20 Dwd 1 (Swami Vijayananda Saraswati)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಗವಾನ್ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 21ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ ಹೇಳಿದರು.

ಇಲ್ಲಿನ ಸಿ.ಬಿ. ನಗರದ ಆಶ್ರಮದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21ರಂದು ಬೆಳಗ್ಗೆ 9.30 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಯುವ ಸಮಾವೇಶ ಆಯೋಜಿಸಲಾಗಿದೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸುವರು. ಗದಗ- ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಮತ್ತು ಅಂಕಣಕಾರ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು `ಯುವ ಶಕ್ತಿ ಹಾಗೂ ಸ್ವಾಮಿ ವಿವೇಕಾನಂದರು' ವಿಷಯ ಕುರಿತು ಪ್ರವಚನ ನೀಡುವರು. ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉದ್ಘಾಟಿಸುವರು ಎಂದರು.

ಫೆ. 22ರಂದು ಬೆಳಗ್ಗೆ 8.30ಕ್ಕೆ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶಿಕ್ಷಕರ ಸಮಾವೇಶ ಜರುಗುವುದು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿಯವರು ಅಧ್ಯಕ್ಷತೆ ವಹಿಸುವರು. ಜಿಲ್ಲಾಽಕಾರಿ ದಿವ್ಯ ಪ್ರಭು ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ, ಶಿಕ್ಷಣಾಽಕಾರಿಗಳು ಭಾಗವಹಿಸುವರು ಎಂದರು.

ಫೆ. 22ರಂದು ಸಂಜೆ 5.30ಕ್ಕೆ ಆಶ್ರಮದ ಆವರಣದಲ್ಲಿ ಶ್ರೀ ರಾಮಕೃಷ್ಣ- ಸ್ವಾಮಿ ವಿವೇಕಾನಂದರ ಸ್ಮರಣೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಖ್ಯಾತ ಉದ್ಯಮಿ ಡಾ. ಸಿ.ಎಚ್ ವಿ.ಎಸ್.ವಿ ಪ್ರಸಾದ್ ಉದ್ಘಾಟಿಸುವರು. ರಾಘವೀ ರಾಹುಲ್ ಹಣಮನಗಸಿ ಅವರಿಂದ `ಕಿತ್ತೂರು ರಾಣಿಚೆನ್ನಮ್ಮ' ಏಕಪಾತ್ರಾಭಿನಯ ಇರುತ್ತದೆ ಎಂದರು.

ಫೆ. 23ರಂದು ಸಂಜೆ 5.30ಕ್ಕೆ ಆಶ್ರಮದ ಆವರಣದಲ್ಲಿ ಶ್ರೀ ಶಾರದಾದೇವಿ ಸ್ಮರಣೋತ್ಸವ ಹಾಗೂ ಸಂಸ್ಕೃತಿಕ ಕಾರ್ಯಕ್ರಮವಿದೆ. ಮಿಡ್‌ಟೌನ್ ರೋಟರಿ ಕ್ಲಬ್ ಅಧ್ಯಕ್ಷ ದೀಪಕ ಆಕಳವಾಡಿ ಉದ್ಘಾಟಿಸುವರು. ಕ್ಲಾಸಿಕ್ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಉಪ್ಪಾರ, ಲೋಕಾಯುಕ್ತ ನಿವೃತ್ತ ಅಽಕಾರಿ ಶಂಕರ ರಾಗಿ ಉಪಸ್ಥಿತರಿರುವರು. ನಂತರ ಭಕ್ತಿ ಸಂಗೀತ ನಡೆಯಲಿದೆ ಎಂದರು.

ಮೋಹನ ರಾಮದುರ್ಗ, ವಿವೇಕ ನಾಯಕ್, ಸುಭಾಷ ಗೌಡರ, ಸಿದ್ದನಗೌಡ, ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net